ಅಸ್ಸಾಂ ನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಒಂದು ಸಾವಿರಕ್ಕೂ ಹಳ್ಳಿಗಳು ಜಲಸಮಾಧಿಯಾಗುವುದರ ಜತೆಗೆ ಆರು ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಪ್ರವಾಹದ ಭೀಕರತೆಗೆ ಸಾವಿರಾರು ಹಳ್ಳಿಗಳು ಮುಳುಗಡೆಯಾಗಿದ್ದು ಸುಮಾರು 6 ಲಕ್ಷ ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈಗಾಗಲೇ ಪ್ರವಾಹ ಪೀಡಿತ ಅಸ್ಸಾಂನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ಸೇನೆಯ ಆರು ತಂಡಗಳು ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಕಳೆದ ಆರು ದಿನಗಳಿಂದ ಅಸ್ಸಾಂನ 19 ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡು ಲಕ್ಷಾಂತರ ಜನ ಊಟ ತಿಂಡಿಯಿಲ್ಲದೇ ಹಸಿವಿನಿಂದ ಕಂಗಲಾಗಿದ್ದು, ಅದರ ಜತೆಗೆ ಸಾವಿರಾರು ಹೆಕ್ಟೇರ್ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿದೆ. ಈಗಾಗಲೇ 1500 ಕ್ಕೂ ಹೆಚ್ಚ್ಚು ಮಂದಿಯನ್ನು ರಕ್ಷಿಸಿರುವ ಸೇನಾ ಸಿಬ್ಬಂದಿ ಜನರನ್ನು ಉಳಿಸಲು ಹರ ಸಾಹಸ ಪಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.