ಕರ್ನಾಟಕ

ಮರದ ಕೊಂಬೆ ಬಿದ್ದು ಮತದಾರ ಸಾವು: ಬಿಬಿಎಂಪಿ ಚುನಾವಣೆ ವೇಳೆ ದುರ್ಘಟನೆ

Pinterest LinkedIn Tumblr

civic-pollಬೆಂಗಳೂರು: ಮತದಾರರೊಬ್ಬರು ಮತಗಟ್ಟೆಗೆ ತಮ್ಮ ಹಕ್ಕು ಚಲಾಯಿಸಲು ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಾಜಿನಗರದಲ್ಲಿ ಶನಿವಾರ ನಡೆದಿದೆ.

ಫಯಾಜ್ ಝಹೀದ್ (28) ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶಿವಾಜಿನಗರ ಜೂನಿಯರ್ ಕಾಲೇಜಿಗೆ ತಮ್ಮ ಪೋಷಕರೊಂದಿಗೆ ಮತ ಚಲಾಯಿಸಲು ತೆರಳಿದ್ದರು. ಅವರ ತಂದೆ-ತಾಯಿ ವೋಟು ಹಾಕಿ ಮತಗಟ್ಟೆಯಿಂದ ಹೊರಬಂದು ಆಗಿತ್ತು. ಫಯಾಜ್ ಮತಗಟ್ಟೆಯ ಒಳಗೆ ಕಾಲಿಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಕೂಡಲೇ ಫಯಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮರದ ಕೊಂಬೆ ಅವರ ತಲೆಯ ಬಲಭಾಗಕ್ಕೆ ಬಿದ್ದು ರಕ್ತ ಒಂದೇ ಸಮನೆ ಸುರಿಯುತ್ತಿತ್ತು ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ.

ನಗರದ ಕನ್ನಿಂಗ್ ಹ್ಯಾಂ ರಸ್ತೆಯ ಬಳಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಫಯಾಜ್ ಸ್ವಂತ ವ್ಯಾಪಾರ ನಡೆಸುತ್ತಿದ್ದು, ಎಲ್ಲರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದರು. ಈ ಘಟನೆಯಿಂದ ಹೊರಬರಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Write A Comment