ಕರ್ನಾಟಕ

ಜಾಮೀನು ನೀಡದ ಕೋರ್ಟ್: ಕಣ್ಣೀರಿಟ್ಟ ರಿಯಾಜ್ !

Pinterest LinkedIn Tumblr

riyazಲೋಕಾಯುಕ್ತ ಕಚೇರಿಯಲ್ಲೇ ಭ್ರಷ್ಟಾಚಾರವೆಸಗಿದ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ಸಂಸ್ಥೆ ಸಾರ್ವಜನಿಕ ಸಂಪರ್ಕ ವಿಭಾಗದ ಜಂಟಿ ಆಯುಕ್ತ ಸಯ್ಯದ್ ರಿಯಾಜ್​ಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ಕೋರ್ಟ್ ನಿರಾಕರಿಸಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಕೊನೆಗೂ ರಿಯಾಜ್ ನನ್ನು  ಭಾನುವಾರ ವಿಶೇಷ ತನಿಖಾ ತಂಡ ಬಂಧಿಸಲು ಯಶಸ್ವಿಯಾಗಿತ್ತಲ್ಲದೇ ಸೋಮವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ಐಟಿ ವಿಚಾರಣೆ ಹಿನ್ನೆಲೆಯಲ್ಲಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿತು.

ಈ ನಡುವೆ ಸಯ್ಯದ್ ರಿಯಾಜ್ ಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಲೋಕಾಯುಕ್ತ ಕೋರ್ಟ್ ನ ನ್ಯಾಯಾಧೀಶರು ಆಗಸ್ಟ್ 5ರ ತನಕ ವಿಶೇಷ ತನಿಖಾ ತಂಡದ ವಶಕ್ಕೆ ನೀಡಿ ಆದೇಶಿಸಿದ್ದಾರೆ.ಈ ಸಮಯದಲ್ಲಿ ಆರೋಪಿ ಸಯ್ಯದ್ ರಿಯಾಜ್ ಕಟಕಟೆಯಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆದಿದೆ.

Write A Comment