ಮನೋರಂಜನೆ

ನಟಿಯೆದುರೇ ಹಸ್ತ ಮೈಥುನ ಮಾಡಿಕೊಂಡ ಭೂಪ !

Pinterest LinkedIn Tumblr

7850facebook-Noticia-17665ಇತ್ತೀಚೆಗೆ ಯುವತಿಯರ ಎದುರು ಅಸಭ್ಯವಾಗಿ ವರ್ತಿಸಿದ ಹಲವಾರು ಘಟನೆಗಳ ಕುರಿತು ಕೇಳಿದ್ದೀರಿ. ಈ ನಡುವೆ ಪ್ರಖ್ಯಾತ ನಟಿಯೊಬ್ಬರ ನಡುವೆ ವ್ಯಕ್ತಿಯೊಬ್ಬ’ಹಸ್ತಮೈಥುನ’ ಮಾಡಿಕೊಂಡು ಜೈಲು ಪಾಲಾದ ಘಟನೆಯೊಂದು ನಡೆದಿದೆ.

ಹೌದು. ದೇಶದ ಹಲವೆಡೆ ಟಾಕ್ಸಿ ಡ್ರೈವರ್ ಗಳು ಮಹಿಳಾ ಪ್ರಯಾಣಿಕರ ಎದುರು ಹಸ್ತ ಮೈಥುನ ಮಾಡಿಕೊಳ್ಳುವ ಮೂಲಕ ಅಸಭ್ಯವಾಗಿ ವರ್ತಿಸಿರುವ ಘಟನೆ ಮಾಸುತ್ತಿದ್ದಂತೆ ಉದಯೋನ್ಮುಖ ನಟಿ ಕ್ಯಾಮಿಲ್ಲೆ ರಿಗ್ನೀರ್ ಎದುರು ಮೆಟ್ರೋ ರೈಲಿನಲ್ಲಿ ಪ್ರಯಾಣಿಕನೊಬ್ಬ ಇಂತಹ ಅಸಭ್ಯ ವರ್ತನೆ ತೋರಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಪ್ಯಾರಿಸ್ ನಲ್ಲಿ ಈ ಘಟನೆ ನಡೆದಿದ್ದು ನಟಿ ಕ್ಯಾಮಿಲ್ಲೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಆಕೆಯ ಸೌಂದರ್ಯಕ್ಕೆ ಮರುಳಾದ ವ್ಯಕ್ತಿಯೋರ್ವ ಆಕೆಯನ್ನು ವಿಕೃತ ದೃಷ್ಟಿಯಿಂದ ನೋಡುತ್ತಾ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ ನಟಿ ಫೇಸ್ ಬುಕ್ ನಲ್ಲಿ ಹಾಕಿದ್ದು ತನಗಾದ ಆಘಾತವನ್ನು ವಿವರಿಸಿದ್ದಾರೆ.

ಈ ಕುರಿತು ಹಲವರು ಕಾಮೆಂಟ್ ಮಾಡಿದ್ದು ಈ ನಡುವೆ ಪೊಲೀಸರು ಹಸ್ತ ಮೈಥುನ ಮಾಡಿಕೊಂಡ ಕಾಮುಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment