ರಾಷ್ಟ್ರೀಯ

ಅಂಗವಿಕಲತೆ ಅಡ್ಡಿಯಾಗಲಿಲ್ಲ ಇವರ ಸಾಧನೆಗೆ !

Pinterest LinkedIn Tumblr

angaಹುಟ್ಟಿನಿಂದಲೇ ಕಿವುಡು ಮತ್ತು ಮೂಗರಾಗಿದ್ದ ಕೇರಳದ ಇಡುಕ್ಕಿ ಜಿಲ್ಲೆಯ ಕುಗ್ರಾಮವೊಂದರ ಸಾಜಿ ಥಾಮಸ್ ರ ಅದ್ಬುತ ಸಾಧನೆಗೆ ಅವರ ಅಂಗವಿಕಲತೆ ಅಡ್ಡಿಯಾಗಲೇ ಇಲ್ಲ. ಇವರ ಕೈಲೇನಾಗುತ್ತದೆಂದು ಒಮ್ಮೆ ಆಡಿಕೊಂಡವರೇ ಮೂಗಿನ ಮೇಲೆ ಬೆರಳಿಡುವಂತೆ ಸಾಜಿ ಥಾಮಸ್ ಅದ್ಬುತ ಸಾಧನೆ ಮಾಡಿದ್ದಾರೆ.

ಸರ್ಕಾರ ಅಥವಾ ಯಾರದೇ ಸಹಾಯವಿಲ್ಲದೇ ತಮ್ಮ ಬಡತನದ ನಡುವೆಯೂ 14 ಲಕ್ಷ ರೂ. ಗಳ ವೆಚ್ಚದಲ್ಲಿ ಸಾಜಿ ಥಾಮಸ್ ಲಘು ವಿಮಾನ ತಯಾರಿಸಿದ್ದು ತಮಿಳುನಾಡಿದ ಮಣಿಮತ್ತೂರಿನಲ್ಲಿ ಈ ಲಘು ವಿಮಾನ ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ. ಅಲ್ಲದೇ ಸಾಜಿ ಥಾಮಸ್ ಅವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೇವಲ ಏಳನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಿರುವ ಸಾಜಿ ಥಾಮಸ್ ಅವರಿಗೆ ಬಾಲ್ಯದಿಂದಲೇ ಯಂತ್ರೋಪಕರಣಗಳ ಮೇಲೆ ಅತೀವ ಆಸಕ್ತಿ. ಜೀವನೋಪಾಯಕ್ಕಾಗಿ ಟಿವಿ ದುರಸ್ಥಿ ಕಾರ್ಯ ಆರಂಭಿಸಿದ್ದ ಸಾಜಿ ಥಾಮಸ್ ಗೆ ವಿಮಾನಗಳನ್ನು ಕಂಡರೆ ಕುತೂಹಲ. ಒಮ್ಮೆ ಸಾಜಿ ಥಾಮಸ್ ಅವರ ಊರಿನ ರಬ್ಬರ್ ಪ್ಲಾಂಟೇಷನ್ ಗೆ ಔಷಧಿ ಸಿಂಪಡಿಸಲು ಆಗಮಿಸಿದ್ದ ಹೆಲಿಕಾಪ್ಟರ್ ಅವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಹೆಲಿಕಾಪ್ಟರ್ ಪೈಲೆಟ್ ಗಳ ಸ್ನೇಹ ಅವರು ಇಂದು ಲಘು ವಿಮಾನ ತಯಾರಿಸುವ ಮಟ್ಟಿಗೆ ಮುಂದುವರೆಸಿದೆ. ಸಾಜಿ ಥಾಮಸ್ ತಯಾರಿಸಿರುವ ಲಘು ವಿಮಾನ ಯಶಸ್ವಿ ಹಾರಾಟ ನಡೆಸುತ್ತಿದ್ದಂತೆಯೇ ಅವರ ನೆರವಿಗೆ ಸರ್ಕಾರ ಧಾವಿಸಬೇಕೆಂಬ ಕೂಗು ಈಗ ಕೇಳಿ ಬರುತ್ತಿದೆ.

Write A Comment