ಕರ್ನಾಟಕ

ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡಿದರೆ 48 ಗಂಟೆಯೊಳಗೆ ನಿಮ್ಮ ಮನೆ ಮುಂದೆ ಗ್ಯಾಸ್ 

Pinterest LinkedIn Tumblr

gas

ಬೆಂಗಳೂರು, ಜು.11: ಇನ್ನು ಮುಂದೆ ಮನೆಗೆ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಸಂಪರ್ಕ ಪಡೆಯಲು ಏಜೆನ್ಸಿಗಳ ಬಳಿ ಅಲೆಯಬೇಕಾದ ಅಗತ್ಯವಿಲ್ಲ. ಏಕೆಂದರೆ, ಗ್ರಾಹಕರು ಇನ್ನು ಮುಂದೆ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಭರ್ತಿ ಮಾಡಿದರೆ 48 ಗಂಟೆಯೊಳಗೆ ನಿಮ್ಮ ಮನೆ ಮುಂದೆ ಗ್ಯಾಸ್ ಹಾಜರಿರುತ್ತದೆ.

ಇದೇ 15ರಿಂದ ಅಡುಗೆ ಅನಿಲ ಪೂರೈಸುವ ಐಒಸಿ, ಎಚ್‌ಪಿಸಿ ಮತ್ತು ಬಿಪಿಸಿ ಕಂಪೆನಿಗಳು ಆನ್‌ಲೈನ್ ಮೂಲಕ ಗ್ಯಾಸ್ ವಿತರಣೆ ಮಾಡಲು ಮುಂದೆ ಬಂದಿವೆ. ಬುಧವಾರದಿಂದ ಇದು ಅಧಿಕೃತವಾಗಿ ದೇಶಾದ್ಯಂತ ಜಾರಿಯಾಗಲಿದ್ದು, ಆನ್‌ಲೈನ್‌ನಲ್ಲೇ ಅಧಿಕೃತ ದಾಖಲೆಗಳನ್ನು ದಾಖಲಿಸಿದರೆ ಎರಡು ದಿನಗಳಲ್ಲಿ ನಿಮ್ಮ ಮನೆಗೆ ಗ್ಯಾಸ್ ಸಂಪರ್ಕ ಸಿಗಲಿದೆ. ಈ ಹಿಂದೆ ಗ್ರಾಹಕರು ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯಬೇಕಾದರೆ ಏಜೆನ್ಸಿಗಳ ಬಳಿ ಹಲವಾರು ಬಾರಿ ಅಲೆದಾಡಬೇಕಿತ್ತು. ಒಂದು ದಾಖಲೆ ನೀಡುವುದು ವಿಳಂಬವಾದರೆ ವಾರಗಟ್ಟಲೆ ವಿಳಂಬವಾಗುತ್ತಿತ್ತು.

ಗ್ರಾಹಕರಿಗೆ ಉಂಟಾಗುತ್ತಿದ್ದ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದಲೇ ಈ ಕಂಪೆನಿಗಳು ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಲು ತೀರ್ಮಾನಿಸಿವೆ. ಯಾವುದೇ ಒಬ್ಬ ವ್ಯಕ್ತಿ ತನಗೆ ಗ್ಯಾಸ್ ಪಡೆಯಬೇಕೆಂದರೆ ಕೆವೈಸಿಮೂಲಕ ಅರ್ಜಿಗಳನ್ನು ಭರ್ತಿ ಮಾಡಿದರೆ ಸಾಕು, ಎರಡು ದಿನಗಳಲ್ಲಿ ಸಂಪರ್ಕ ಒದಗಿಸುತ್ತಾರೆ. ಆದರೆ, ಗ್ಯಾಸ್ ಸಂಪರ್ಕಕ್ಕೆ ಪಡಿತರ ಚೀಟಿ ಕಡ್ಡಾಯವಾಗಿರುವುದಿಲ್ಲ. ಬದಲಿಗೆ ಆಧಾರ್ ಕಾರ್ಡ್, ನಿವಾಸಿ ದೃಢೀಕರಣ ಪತ್ರ, ಪಾಸ್‌ಪೋರ್ಟ್ ನೀಡಿದರೆ ಸಾಕು. ಇದರ ಜತೆಗೆ ಗ್ರಾಹಕರು ಅರ್ಜಿಯಲ್ಲಿ ಮುಂದೆ ನಾನು ಸಿಲಿಂಡರ್ ಬಿಟ್ಟುಕೊಡುತ್ತೇನೆ (ಗೀವ್‌ಅಪ್) ಎಂದು ಬರೆದುಕೊಡಬೇಕು. ಸಬ್ಸಿಡಿ ನೆರವು ಪಡೆಯುವವರು ಆನ್‌ಲೈನ್‌ನಲ್ಲಿ 250ರೂ. ನಮೂದಿಸಬೇಕು. ಬಳಿಕ ಇದು ನಿಮ್ಮ ಖಾತೆಗೆ ಜಮೆಯಾಗುತ್ತದೆ. 15ರಂದು ದೇಶಾದ್ಯಂತ ಜಾರಿಗೆ ಬರಲಿದ್ದು, ಗ್ರಾಹಕರು ಆನ್‌ಲೈನ್ ಮೂಲಕವೇ ಗ್ಯಾಸ್ ಸಂಪರ್ಕ ಪಡೆದುಕೊಳ್ಳಬಹುದು.

Write A Comment