ಮುಂಬೈ

ಅತ್ಯಾಚಾರಿಗಳನ್ನು ಬಂಧಿಸುದಕ್ಕಾಗಿ ಬಾಲಕಿಯನ್ನು ಮತ್ತೆ ಅತ್ಯಾಚಾರಿಗಳ ಕೈಗೆ ನೀಡಿ ಅತ್ಯಾಚಾರ ಮಾಡಿಸಿದ ಪೊಲೀಸರು….ಮುಂದೆ ಏನಾಯಿತು ನೀವೇ ಓದಿ ..

Pinterest LinkedIn Tumblr

girle rape

ಮುಂಬೈ, ಜು.11: ಸಮಾಜ ಹಾಗೂ ಪೊಲೀಸ ಇಲಾಖೆ ಎರಡಕ್ಕೂ ಅಪಮಾನ ಮಾಡುವಂತಹ ಹೀನಾಯ ಘಟನೆಯೊಂದು ಮಹಾರಾಷ್ಟ್ರದ ಜಾಲ್ನಾ ಪಟ್ಟಣದಲ್ಲಿ ನಡೆದಿದೆ.

17 ವರ್ಷದ ಬಾಲಕಿಯೊಬ್ಬಳ ಮೇಲೆ ಕೆಲ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬಾಲಕಿ ಪೊಲೀಸರಿಗೆ ದೂರು ನೀಡಿದಳು. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಉಪಾಯ ಮಾಡಿ, ಬಾಲಕಿಯನ್ನು ತನ್ನ ಮೇಲೆ ಅತ್ಯಾಚಾರ ನಡೆಸಿದವರನ್ನು ಭೇಟಿಯಾಗುವಂತೆ ವ್ಯವಸ್ಥೆ ಮಾಡಿದರು. ಅವರು ಅವಳನ್ನು ಭೇಟಿ ಮಾಡಲು ಬಂದಾಗ ಅವರನ್ನು ಹಿಡಿದು ಹಾಕುವುದು ಪೊಲೀಸರ ಯೋಜನೆಯಾಗಿತ್ತು. ನಿನ್ನೆ ಸಂಜೆ ಪೊಲೀಸರು ಬಾಲಕಿಯನ್ನು ಕಳುಹಿಸಿದ್ದರು. ಆದರೆ, ಪೊಲೀಸರು ಖದೀಮರನ್ನು ಹಿಡಿಯಲು ಹೋಗುವಷ್ಟರಲ್ಲಿ ಅದೇ ದುಷ್ಕರ್ಮಿಗಳು ಪುನಃ ಬಾಲಕಿಯ ಮೇಲೆ ಎರಡನೆ ಬಾರಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು. ಈ ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಎಜ್ಜುಪ್ವಾರ್‌ನನ್ನು ಅಮಾನತು ಮಾಡಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.

ಘಟನೆ ವಿವರ: ಜು.7ರಂದು ಈ ಬಾಲಕಿ ತನ್ನ ಗೆಳೆಯನ ಜತೆ ಹೋಗುತ್ತಿದ್ದಾಗ ಸುಮಾರು 20 ವರ್ಷದ ಇಬ್ಬರು ದುಷ್ಕರ್ಮಿಗಳು ಗೆಳೆಯನನ್ನು ಬೆದರಿಸಿ, ಬಾಲಕಿಯನ್ನು ಸಮೀಪದ ಅರಣ್ಯಕ್ಕೆ ಎಳೆದೊಯ್ದು, ಚಾಕು ತೋರಿಸಿ ಅತ್ಯಾಚಾರ ನಡೆಸಿದ್ದರು. ಮೊಬೈಲ್ ಕಿತ್ತುಕೊಂಡು ಕಳುಹಿಸಿದ್ದರು. ನಂತರ ಎರಡು ಸಾವಿರ ರೂ. ಕೊಟ್ಟರೆ ಮೊಬೈಲ್ ಹಾಗೂ ವಿಡಿಯೋ ಕ್ಲಿಪ್ ಹಿಂದಿರುಗಿಸುವುದಾಗಿ ಬಾಲಕಿ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಹೇಳಿದ್ದರು. ಇವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಪಡೆದ ಇನ್ಸ್‌ಪೆಕ್ಟರ್ ಎಜ್ಜುಪ್ವಾರ್ ದುಷ್ಕರ್ಮಿಗಳ ಬಂಧನಕ್ಕೆ ಈ ಯೋಜನೆ ರೂಪಿಸಿದ್ದ. ಈ ಎಲ್ಲ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿ ವಿಶ್ವಾಸ್ ನಂಗ್ರೆ ಪಾಟೀಲ್ ಅವರು ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Write A Comment