ಅಂತರಾಷ್ಟ್ರೀಯ

ಜೀವದ ಹಂಗು ತೊರೆದು ಕೊಲೆಗಡುಕರನ್ನು ಹಿಡಿದುಕೊಟ್ಟ ಮೆಕ್ಯಾನಿಕ್ ಗಳು..!

Pinterest LinkedIn Tumblr

arrest

ಅನ್ಸ್‌ಬಾದ್(ಜರ್ಮನಿ), ಜು.11: ಹಿರಿಯ ನಾಗರಿಕರಿಬ್ಬರನ್ನು ಗುಂಡಿಟ್ಟು ಕೊಂದಿದ್ದ ಶಂಕಿತ ಬಂದೂಕುಧಾರಿ ಉಗ್ರನೊಬ್ಬನನ್ನು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರಿಬ್ಬರು ಜೀವದ ಹಂಗು ತೊರೆದು ಪೊಲೀಸರಿಗೊಪ್ಪಿಸಿದ ಘಟನೆ ಜರ್ಮನಿಯ ಉತ್ತರದ ಬವೇರಿಯ ಪ್ರಾಂತ್ಯದ ಅನ್ಸ್‌ಬಾಶ್ ಜಿಲ್ಲೆಯ ಲಿಯೆಟ್‌ಕ್‌ಶೌಸನ್ ನಗರದಲ್ಲಿ ನಡೆದಿದೆ.

ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ಈ ಅಪರಿಚಿತ ಬಂದೂಕುಧಾರಿ 82 ವರ್ಷದ ಒಬ್ಬ ಮಹಿಳೆ ಹಾಗೂ 72 ವರ್ಷದ ಸೈಕಲ್ ಸವಾರರೊಬ್ಬರನ್ನು ಹತ್ಯೆ ಮಾಡಿದ್ದ. 82 ವರ್ಷದ ಮಹಿಳೆ ತನ್ನ 50ನೇ ವಿವಾಹ ವರ್ಷ ಆಚರಿಸಿಕೊಳ್ಳುತ್ತಿದ್ದರು. ಆ ಸಂದರ್ಭ ಈ ದುಷ್ಕರ್ಮಿ ಆಕೆಯನ್ನು ಗುಂಡಿಟ್ಟು ಕೊಂದು ಹಾಕಿದ್ದ. ನಂತರ ಅಲ್ಲಿಂದ 5 ಕಿ.ಮೀ ದೂರದಲ್ಲಿ 72 ವರ್ಷದ ಸೈಕಲ್ ಸವಾರನನ್ನು ಹತ್ಯೆ ಮಾಡಿದ್ದ.

ಈ ಖದೀಮನನ್ನು ಹಿಡಿಯಲು ಪೊಲೀಸ್ ಪಡೆ ನಾಲ್ಕು ಹೆಲಿಕಾಪ್ಟರ್‌ಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿತ್ತು. ಆದರೆ ಸಿಕ್ಕಿರಲಿಲ್ಲ. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ 30 ಕಿ.ಮೀ ದರದ ಪೆಟ್ರೋಲ್ ಬಂಕ್‌ವೊಂದರ ಬಳಿ ಅಂಗಡಿಯಲ್ಲಿದ್ದ ಇಬ್ಬರನ್ನು ಹಂತಕ ಬೆದರಿಸುತ್ತಿದ್ದ. ಇದನ್ನು ಕಂಡ ಗ್ಯಾರೇಜ್ ಕೆಲಸಗಾರರಿಬ್ಬರು ಅವನ ಮೇಲೆ ದಾಳಿ ಮಾಡಿ ಬಂದೂಕು ಕಿತ್ತುಕೊಂಡು ಅವನನ್ನು ಹಿಡಿದು ಹಾಕಿದರು.

Write A Comment