ಕರ್ನಾಟಕ

ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ದರೋಡೆ

Pinterest LinkedIn Tumblr

train

ಬಂಗಾರಪೇಟೆ, ಜೂ.25: ಬೆಂಗಳೂರಿನಿಂದ ಬಂಗಾರಪೇಟೆ ಮಾರ್ಗವಾಗಿ ಹೌರಾಗೆ ಹೋಗುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ದರೋಡೆ ನಡೆದಿದೆ. ರಾತ್ರಿ 9.30ರ ಸಮಯದಲ್ಲಿ ಮಾಲೂರು ತಾಲೂಕಿನ ವ್ಯಾಪ್ತಿಗೆ ಬರುವ ಬಂಗಾರಪೇಟೆ ಸಮೀಪದ ಮರ್ಲಹಳ್ಳಿ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಘಟನೆಯಿಂದ ರೈಲ್ವೆ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿಸಿದೆ.

ಬೆಂಗಳೂರಿನಿಂದ ಬರುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಬೋಗಿಗೆ ಹತ್ತಿದ ದರೋಡೆಕೋರರು, ಮರ್ಲಹಳ್ಳಿ ಬರುತ್ತಿದ್ದಂತೆಯೇ ಚಾಕು-ಚೂರಿ ತೋರಿಸಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹೊಡ್ಡಿ ಅವರ ಬಳಿ ಇದ್ದ ಸುಮಾರು 40 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಒಂದು ಮೂಲದ, ಪ್ರಕಾರ ರೈಲಿನಲ್ಲಿ ನಗದನ್ನು ದೋಚಿಕೊಂಡ ದರೋಡೆಕೋರರು ಮರ್ಲಹಳ್ಳಿ ಬಳಿ ರೈಲ್ವೆ ಚೈನ್ ಎಳೆದು ಕೆಳಗೆ ಇಳಿದು ಕತ್ತಲಲ್ಲಿ ಪರಾರಿಗೊಂಡಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದು ಮೂಲದ ಪ್ರಕಾರ, ದರೋಡೆಕೋರರು ಪ್ರಯಾಣಿಕರ ಸೋಗಿನಲ್ಲಿ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆದರೆ ಇದರ ಬಗ್ಗೆ ಖಚಿತವಾಗಿ ರೈಲ್ವೆ ಪೊಲೀಸರು ಬಾಯಿ ಬಿಡುತ್ತಿಲ್ಲ. ಸಮೀಪದ ವರದಾಪುರ ರೈಲ್ವೆ ಗೇಟ್ ಆಜುಬಾಜುವಿನಲ್ಲಿ ನಡೆಯುತ್ತಿದ್ದ ರೈಲು ದರೋಡೆಗಳು ಇತ್ತೀಚಿನ ದಿನಗಳಲ್ಲಿ ತಣ್ಣಗಾಗಿತ್ತು.ಆದರೆ ಇದೀಗ ಪ್ರಯಾಣಿಕರ ಸೋಗಿನಲ್ಲಿ ಕಳೆದ ರಾತ್ರಿ ನಡೆದ ಹೌರಾ ಎಕ್‌್ತಪ್ರೆಸ್ ರೈಲು ದರೋಡೆ ಪ್ರಯಾಣಿಕರಲ್ಲಿ ಗಾಬರಿಯನ್ನುಂಟು ಮಾಡಿದೆ. ಘಟನೆ ಬೆಂಗಳೂರು ದಂಡು ರೈಲ್ವೆ ಠಾಣೆ ನಿಲ್ದಾಣ ವ್ಯಾಪ್ತಿಯಲ್ಲಿ ನಡೆದಿದ್ದರೂ ನಡೆದಿರುವ ಸ್ಥಳ ಸ್ಥಳೀಯ ರೈಲ್ವೆ ಠಾಣೆಯ ಸಮೀಪದಲ್ಲಿ ನಡೆದಿರುವುದು ಬೆಚ್ಚಿ ಬೀಳಿಸುವಂತೆ ಮಾಡಿದೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.ಸ್ಥಳೀಯ ರೈಲ್ವೆ ಪಿಎಸ್‌ಐ ಪ್ರಕಾಶ್ ಕಾರ್ಯವೈಖರಿ ಬಗ್ಗೆ ಹಿರಿಯ ಅಧಿಕಾರಿಗಳು ಅಸಮಧಾನಗೊಂಡು ತೀವ್ರ ತರಾಟೆಗೆ ತೆಗೆದುಕೊಂಡರೆನ್ನಲಾಗಿದೆ.

Write A Comment