ಕನ್ನಡ ವಾರ್ತೆಗಳು

ಜೂನ್. 27 : “ಅಂತರಾಷ್ಟ್ರೀಯ ಮಾದಕ ಮುಕ್ತ ದಿನ”ದಂದು ವಿಕಾಸ್ ಕಾಲೇಜ್‌ನಿಂದ ಜಾಗೃತಿ ಕಾರ್ಯಕ್ರಮ.

Pinterest LinkedIn Tumblr

vikas_drug_workshp

ಮಂಗಳೂರು,ಜೂನ್ .25: ಮಾದಕ ದ್ರವ್ಯ ಸೇವನೆ ಭಾರತದಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ಯುವ ಜನೆತೆಗೆ ಅದು ತಮ್ಮನ್ನು ಉಲ್ಲಾಸಿತರಾಗಿ ಇರುವಂತೆ ಮಾಡುವ ಮೋಜಿನ ವಸ್ತುವಾಗಿದೆ. ಅದರ ದೂರಗಾಮಿ ದುಷ್ಪರಿಣಾಮಗಳು ಗೊತ್ತಿದ್ದರೂ ಅವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ವಿಕಾಸ್ ಪದವಿ ಪೂರ್ವ ಕಾಲೇಜು, ಮಂಗಳೂರು. ಮಾದಕ ದ್ರವ್ಯಗಳ ಸೇವನೆಯಿಂದಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈವೊಂದು ಕಾರ್ಯಕ್ರಮವು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಸಹಗೋಗದೊಂದಿಗೆ ದಿನಾಂಕ 27-06-2015  ಶನಿವಾರ ಮಧ್ಯಾಹ್ನ 2.45 ಕ್ಕೆ ‘ಅಂತರಾಷ್ಟ್ರೀಯ ಮಾದಕ ಮುಕ್ತ ದಿನ’ದ ಪ್ರಯುಕ್ತವಾಗಿ ಕೆಲವೊಂದು ಕಾರ್ಯಕ್ರಮಗಳ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶರಣಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮಗಳ ವಿವರ
1) ತೇಪೆಚಿತ್ರ (ಕೊಲಾಜ್ ಮೇಕಿಂಗ್) ಸ್ಪರ್ಧೆ. 9 ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ. ವಿಷಯ:”Say no to alcohol and drugs/smoking”
2) ವಿಚಾರ ಸಂಕಿರಣ ‘ಹದಿಹರೆಯದ ಮಕ್ಕಳಿಗೆ ಉತ್ತಮ ಪೋಷಣಾಕೌಶಲ್ಯ’
3) ವಿವಿಧ ಬಗೆಯ ಮಾದಕ ವಸ್ತುಗಳು ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳು.
ಪೋಲಿಸ್ ಇಲಾಖೆಯ ಜೊತೆ, ಲಘು ಉಪಹಾರದೊಂದಿಗೆ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ನಡುವೆ ವಿಚಾರ ವಿನಿಮಯದೊಂದಿಗೆ ಈ ಕಾರ್ಯಕ್ರಮ ಆಯೋಜನೆ ಗೊಳ್ಳಲಿದೆ.

“ಇವತ್ತು ನಮ್ಮ ಸಮಾಜದಲ್ಲಿ ಹಲವು ಬಗೆಯ ತಂಬಾಕು, ಡ್ರಗ್ಸ್, ಮದ್ಯಪಾನ ಇತ್ಯಾದಿಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ತರುಣರು ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ‌ಇಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ.ಇದನ್ನು ನಿಯಂತ್ರಿಸಿ ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಅನಿವಾರ್ಯತೆ ಇದೆ. ಪ್ರೌಢಶಿಕ್ಷಣ ಕಲಿಯುವಾಗಲೇ ಮಕ್ಕಳಿಗೆ ಇದರ ಬಗ್ಗೆ ಮಾಹಿತಿಕೊಡುವುದು ಸೂಕ್ತ. ಆದುದರಿಂದ ಇದರ ದುಷ್ಪರಿಣಾಮಗಳ ಬಗ್ಗೆ ಪೋಲಿಸ್ ಇಲಾಖೆಯ ಮೂಲಕ ತಿಳಿಸುವುದು ಉತ್ತಮ ಮಾರ್ಗ ಎಂಬುದು.ಕಾಲೇಜಿನ ಅಧ್ಯಕ್ಷರಾದ ಶ್ರೀ ಕೃಷ್ಣ ಜೆ.ಪಾಲೆಮಾರ್ ಈ ವಿಷಯದ ಬಗ್ಗೆ ಅವರ ಅನಿಸಿಕೆಗಳು.

ಕಾಲೇಜಿನ ಆಡಳಿತಗಾರರಾದ ಶ್ರೀ ಕಾಲಿನ್ ಡಿ’ಸೋಜರವರ ಅಭಿಪ್ರಾಯದಂತೆ, ಈ ಕಾರ್ಯಕ್ರಮವು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ಅವರ ಪೋಷಕರಿಗೂ ಉಪಯುಕ್ತವಾಗಲಿದೆ. ಈ ಮೂಲಕ ಹೆತ್ತವರು ತಮ್ಮ ಮಕ್ಕಳ ಜೊತೆಗೆ ಸುತ್ತಮುತ್ತಲಿನ ಇತರ ಮಕ್ಕಳ ಬಗ್ಗೆ ಗಮನ ಹರಿಸಿ ಪಾನ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ.

ಈ ಕಾರ್ಯಕ್ರಮವು ಉಚಿತ ಪ್ರವೇಶದಾಗಿದ್ದು ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 10,000. ದ್ವಿತೀಯ ಬಹುಮಾನವಾಗಿ 5000 ತೃತೀಯ ಬಹುಮಾನವಾಗಿ ರೂ. 3000 ನೀಡಲಾಗುತ್ತಿದೆ. ಈ ಕಾರ್ಯಕ್ರಮವು ಶನಿವಾರ ಮಧ್ಯಾಹ್ನ 2.45  ರಿಂದ 5.00 ಗಂಟೆಯವರೆಗೆ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಘಟಕರಾದ ನವೀನ್. ಎಸ್.ಎ ಉಪ ಪ್ರಾಂಶುಪಾಲರು, ( ಮೊಬೈಲ್ ನಂ: 7022901674) ಇವರನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

Write A Comment