ಕರ್ನಾಟಕ

ಅವರು ಬಳೆ ಕೊಟ್ಟರೆ ನಾನು ಸೀರೆ ಕಳುಹಿಸುತ್ತೇನೆ: ತಂಗಡಗಿ

Pinterest LinkedIn Tumblr

shi

ಬೆಂಗಳೂರು: ವಿದ್ಯಾರ್ಥಿ ಯಲ್ಲಾಲಿಂಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಂಡಗಿ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೊಪ್ಪಿಸಲಾಗಿದ್ದು, ತನಿಖೆಗೆ ಅಗತ್ಯವಾದ ಎಲ್ಲಾ ಸಹಕಾರವನ್ನು ಒದಜಗಿಸುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯನವರೇ ಖುದ್ದು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖೆಯು ನಿಸ್ಪಕ್ಷಪಾತವಾಗಿ ನಡೆಯಲಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡ  ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕಱಣದಲ್ಲಿ ಆರೋಪಿಯಾಗಿ ಕೇಳಿ ಬರುತ್ತಿರುವ ಹನುಮೇಶ್ ನಾಯಕನನ್ನು ತಮ್ಮ ಬಲಗೈ ಬಂಟ ಎಂದು ಬಿಂಬಿಸಾಲಗುತ್ತಿದೆ. ಆದರೆ ಆತ ಯಾರೋ ನಾನ್ಯಾರೋ ಎಂದಿರುವ ಅವರು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ವೇಳೆ, ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ತಮಗೆ ಬಳೆ ಕಳುಹಿಸುತ್ತಾರಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಭಾರತೀಯ ಸಂಪ್ರದಾಯದಲ್ಲಿ ಗಂಡು ಮಕ್ಕಳು ಬಳೆ ತೊಟ್ಟುಕೊಳ್ಳುವ ರೂಢಿ ಇಲ್ಲ. ಆದರೆ ಹೆಂಗಸರು ಸೀರೆ ಉಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಅವರು ಬಳೆ ಕಳುಹಿಸಿದರೆ ನಾನು ಅವರಿಗೆ ಸೀರೆಯನ್ನು ಕಳುಹಿಸುತ್ತೇನೆ ಎಂದ ಅವರು, ಬಿಜೆಪಿ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಏನಿದು ಪ್ರಕರಣ?:ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹುಲಿ ಹೈದರ್ ಗ್ರಾಮ ಪಂಚಾಯತ್‌ನಲ್ಲಿ ನಡೆದ ಅವ್ಯವಹಾರದ ಬಗ್ಗೆ ಮೃತ ಯಲ್ಲಾಲಿಂಗ(17) ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಬೈಟ್ ಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಕೊಪ್ಪಳದ ರೈಲ್ವೆ ನಿಲ್ದಾಣ ಬಳಿ ಆತನನ್ನು 2015ರ ಜ.10ರಂದು ಹತ್ಯೆಗೈಯ್ಯಲಾಗಿತ್ತು.

ಇನ್ನು ಈ ಬಗ್ಗೆ ಸಚಿವ ಶಿವರಾಜ ತಂಗಡಗಿ ಅವರ ನಿಕಟ ಬೆಂಬಲಿಗ ಮಹಾಂತೇಶ ನಾಯಕ ಆಗಾಗ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು, ಪ್ರಕರಣ ಸಂಬಂಧ ಮಹಾಂತೇಶ ನಾಯಕ ಸೇರಿ ಇದುವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಈ ಪ್ರಕರಣದಲ್ಲಿ ಮತ್ತೋರ್ವ ರಾಜಕಾರಣಿ  ಹನುಮೇಶ ನಾಯಕ ಮೂರನೇ ಆರೋಪಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಇನ್ನೂ ಬಂಧಿಸಲಾಗಿಲ್ಲ. ಆದರೆ ಬಂಧನಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಮೃತ ಯಲ್ಲಾಲಿಂಗ ಕನಕಾಪುರ ನಿವಾಸಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

Write A Comment