ಕರ್ನಾಟಕ

ಡಿನೋಟಿಫಿಕೇಶನ್ ಪ್ರಕರಣ: ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ವಿರುದ್ಧ ಎಫ್ ಐ ಆರ್

Pinterest LinkedIn Tumblr

kumaraswamy-Yeddiyurappa

ಬೆಂಗಳೂರು: ಅಕ್ರಮ ಜಮೀನು ಡಿನೋಟಿಫಿಕೇಶನ್ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮೂರು ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೂಲಕ ನಿವೇಶನಗಳನ್ನು ಹಂಚಿರುವುದರ ಬಗ್ಗೆ ಸಿಎಜಿ ವರದಿಯನ್ನು ಆಧರಿಸಿ ಮಾಹಿತಿ ಹಕ್ಕು ಕಾಯ್ದೆ(ಆರ್ ಟಿ ಐ) ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಅವರು ಲೋಕಾಯುಕ್ತಕ್ಕೆ ೨೧೦೧ರಲ್ಲಿ ನೀಡಿದ್ದ ದೂರಿನ ಮೇರೆಗೆ ಈ ಎಫ್ ಐ ಆರ್ ಗಳನ್ನು ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಗಾಗಿ ಈ ಪ್ರಕರಣಗಳನ್ನು ಸಿ ಐ ಡಿ ಗೆ ವಹಿಸಲಾಗಿದೆ. ಈ ವರದಿ ೨೦೦೭ ರಿಂದ ೨೦೧೨ ರ ನಡುವೆ ನಡೆದ ಅಕ್ರಮ ಡಿನೋಟಿಫಿಕೇಶನ್ ಗಳನ್ನು ಎತ್ತಿ ತೋರಿಸಿತ್ತು.

ಸಿ ಎ ಜಿ ಸುಮಾರು ೪೦ ಅಕ್ರಮ ಡಿನೋಟಿಫಿಕೇಶನ್ ಗಳ ಬಗ್ಗೆ ವರದಿ ಮಾಡಿತ್ತು. ಆರ್ ಟಿ ದಾಖಲೆಗಳ ಪ್ರಕಾರ ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರನ್ನು ಈ ಪ್ರಕರಣದಲ್ಲಿ ಆರೋಪಿ ೧ ಮತ್ತು ಆರೋಪಿ ೨ ಎಂದು ಪಟ್ಟಿಮಾಡಲಾಗಿದೆ.

Write A Comment