ಕರ್ನಾಟಕ

ಜೀವ ಬೆದರಿಕೆ ಆರೋಪ: ಪ್ರತಾಪ್ ಸಿಂಹ ಹೇಳಿದ್ದಿಷ್ಟು

Pinterest LinkedIn Tumblr

pra

ಮೈಸೂರು ಮೇ. 11: ಮಂಗಳೂರು ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿರುವ ಪ್ರಕರಣ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

‘ನಾನು ಯಾವ ಪತ್ರಕರ್ತರಿಗೂ ಜೀವ ಬೆದರಿಕೆ ಹಾಕಿಲ್ಲ. ಇದು ಪ್ರಚಾರಕ್ಕಾಗಿ ಮಾಡಿರುವ ಆರೋಪ’ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಇಲ್ಲ ಸಲ್ಲದ ವರದಿ ಬರೆದಿದ್ದಕ್ಕೆ ಮೂರ್ಖ ಎಂದು ಹೇಳಿದ್ದೇ. ಮೂರ್ಖ ಎಂದು ಹೇಳುವುದು ಜೀವ ಬೆದೆರಿಕೆ ಹಾಕಿದಂತೆ ಆಗುತ್ತದೆಯೇ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಎಡಪಂಥೀಯ, ಬಲಪಂಥೀಯ ಪತ್ರಕರ್ತರಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿದ್ದು ಸಂಸದವಾಗಿರುವ ನನಗೆ ಮಾಡಲು ಸಾಕಷ್ಟು ಕೆಲಸವಿದೆ. ಇಂಥ ಕ್ಷುಲ್ಲಕ ವಿಚಾರಗಳಿಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಅದಲ್ಲೆ ನನ್ನ ಬಳಿ ಸಮಯವೂ ಇಲ್ಲ ಎಂದಿ ಸಿಂಹ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ತೀರ್ಪಿನ ಬಗ್ಗೆ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದನ್ನು ಪ್ರಶ್ನಿಸಿ ಒಬ್ಬ ಜನಪ್ರತಿನಿಧಿ ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದ್ದ ನನಗೆ ಧಮಕಿ ಹಾಕಲಾಗಿತ್ತು, ಅಲ್ಲದೇ ಜೀವ ಒಡ್ಡಿದ್ದರು ಎಂದು ಮಂಗಳೂರಿನ ಪತ್ರಕರ್ತ ಶ್ರೇಯಸ್ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು ಮಾಡಿದ್ದರು.

Write A Comment