ಕರ್ನಾಟಕ

ಬಾಗಲಕೋಟೆ ತೋಟಗಾರಿಕೆ ವಿ.ವಿ ನಾಲ್ಕನೇ ಘಟಿಕೋತ್ಸವ: ನೀರಜಾಗೆ 15, ಶಿವಾಂಗಿಗೆ 5 ಚಿನ್ನದ ಪದಕ

Pinterest LinkedIn Tumblr

pvec23bkt1

ಬಾಗಲಕೋಟೆ: ಬಿ.ಎಸ್‌ಸಿ (ತೋಟ ಗಾರಿಕೆ)ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೈಸೂರಿನ ತೋಟಗಾರಿಕೆ ಮಹಾವಿ ದ್ಯಾಲಯದ ವಿದ್ಯಾರ್ಥಿನಿ, ಮೂಲತಃ ಕೇರಳದ ತ್ರಿಶೂರ್‌ನ ನೀರಜಾ 15 ಚಿನ್ನದ ಪದಕ ಮುಡಿಗೇರಿಸಿ­ಕೊಂಡರು.

ಎಂ.ಎಸ್‌ಸಿ (ತೋಟಗಾರಿಕೆ)ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬೆಳಗಾವಿ ಜಿಲ್ಲೆಯ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಉತ್ತರಪ್ರದೇಶದ ಬರೇಲಿಯ ಶಿವಾಂಗಿ ಅರವಿಂದ್ ಐದು ಚಿನ್ನದ ಪದಕಗಳನ್ನು ಪಡೆದುಕೊಂಡು, ಚಿನ್ನದ ನಗೆ ಬೀರಿದರು.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ನಾಲ್ಕನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ವಿಜ್ಞಾನಿಯಾಗುವಾಸೆ: ನೀರಜಾ  ಮಾತನಾಡಿ, ಮುಂದೆ ವಿಜ್ಞಾನಿ­ಯಾಗುವ ಆಸೆ ವ್ಯಕ್ತಪ ಡಿಸಿದರು.
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ಇನ್‌ಸ್ಪೆಕ್ಟರ್‌ ಪಿ.ಕೆ. ಪಾಥ್‌ ರೋಸ್‌ ಮತ್ತು ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕಿ ಮರಿಯಮ್ಮ ದಂಪತಿಯ ಪುತ್ರಿಯಾಗಿರುವ ನೀರಜಾ, ಸದ್ಯ ತ್ರಿಶೂರ್‌ ಕೃಷಿ ವಿಶ್ವವಿದ್ಯಾಲಯದಲ್ಲಿ ‘ಪ್ಲಾಂಟ್‌ ಬ್ರೀಡಿಂಗ್‌ ಅಂಡ್‌ ಜೆನೆಟಿಕ್ಸ್‌’ ವಿಷಯದಲ್ಲಿ ಎಂ.ಎಸ್‌ಸಿ (ತೋಟ ಗಾರಿಕೆ) ಓದುತ್ತಿದ್ದಾರೆ. ಎಂ.ಎಸ್‌ಸಿ ಮುಗಿದ ಬಳಿಕ ‘ಜೆನೆಟಿಕ್ಸ್‌ ಅಂಡ್‌ ಪ್ಲಾಂಟ್‌ ಬ್ರೀಡಿಂಗ್‌’ ವಿಷಯದಲ್ಲಿ ಪಿಎಚ್‌.ಡಿ ಮಾಡಬ ಯಸಿದ್ದಾಗಿ ಅವರು ತಿಳಿಸಿದರು.

ವೆಚ್ಚಕ್ಕೂ ಕಷ್ಟ: ಎಂ.ಎಸ್‌ಸಿಯಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿರುವ ಅರಭಾವಿ ತೋಟಗಾರಿಕೆ ಮಹಾವಿ­ದ್ಯಾಲಯದ ವಿದ್ಯಾರ್ಥಿನಿ ಶಿವಾಂಗಿ, ‘ನನ್ನ ಕುಟುಂಬದಲ್ಲಿ ಯಾರೂ ನೌಕರಿಯಲ್ಲಿ ಇಲ್ಲದ್ದರಿಂದ ಶೈಕ್ಷಣಿಕ ಖರ್ಚು–ವೆಚ್ಚ ನಿರ್ವಹಿಸಲು ತುಂಬಾ ಕಷ್ಟಪಡುತ್ತಿದ್ದೇನೆ’ ಎಂದರು. ‘ಕುಟುಂಬದವರ ನಂಬಿಕೆ ಮತ್ತು ಪ್ರೋತ್ಸಾಹದಿಂದ ಉನ್ನತ ಶಿಕ್ಷಣ ಪಡೆಯುವ ಗುರಿ ಈಡೇರಿದೆ. ಕುಟುಂಬ ದವರು ಕಾಣುತ್ತಿರುವ ಕನಸುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಉತ್ತರಪ್ರದೇಶದ ಬರೇಲಿಯ ಅರವಿಂದ ತಿವಾರಿ ಮತ್ತು ಮೀನಾ ತಿವಾರಿ ದಂಪತಿಯ ಮಗಳಾದ ಶಿವಾಂಗಿ, ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ‘ಹಣ್ಣು ವಿಜ್ಞಾನ’ ವಿಭಾಗದಲ್ಲಿ ಎಂ.ಎಸ್‌ಸಿ ಪದವಿ ಪಡೆದುಕೊಂಡಿದ್ದು, ಪ್ರಸ್ತುತ ಉತ್ತರ ಪ್ರದೇಶದ ಪಂತ್‌ನಗರದ ಜಿ.ಬಿ.ಪಂತ್‌ ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾರೆ.

19 ವಿದ್ಯಾರ್ಥಿಗಳಿಗೆ 59 ಚಿನ್ನ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 19 ವಿದ್ಯಾರ್ಥಿಗಳಿಗೆ ರಾಜ್ಯಪಾಲರು 59 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

371 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಘಟಿಕೋತ್ಸವದಲ್ಲಿ 282 ಬಿ.ಎಸ್‌ಸಿ (ತೋಟಗಾರಿಕೆ), 87 ಎಂ.ಎಸ್‌ಸಿ (ತೋಟಗಾರಿಕೆ) ಹಾಗೂ ಇಬ್ಬರಿಗೆ ಪಿಎಚ್‌.ಡಿ (ತೋಟಗಾರಿಕೆ) ಸೇರಿದಂತೆ ಒಟ್ಟು 371 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Write A Comment