ಕರ್ನಾಟಕ

ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ 27ನೇ ಸಮ್ಮೇಳನ : ವೈದ್ಯರ ನೇಮಕಾತಿಗೆ ನಿರ್ಬಂಧ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr

siddu

ಹಾಸನ: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿ ಆಗದಿರುವುದಕ್ಕೆ ನಮ್ಮ ಸರ್ಕಾರ ಕಾರಣವಲ್ಲ, ಹತ್ತು ವರ್ಷಗಳಿಂದ ರಾಜ್ಯದಲ್ಲಿ ವೈದ್ಯರ ನೇಮಕಾತಿ ಆಗಿಲ್ಲ. ಈಗ ನಾವು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶನಿವಾರದಿಂದ ಆಯೋ ಜಿಸಿರುವ ಸರ್ಕಾರಿ ವೈದ್ಯಾಧಿಕಾರಿಗಳ ಎರಡು ದಿನಗಳ ರಾಜ್ಯಮಟ್ಟದ 27ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘983 ಸ್ನಾತಕೋತ್ತರ ವೈದ್ಯರು, 321 ಎಂಬಿಬಿಎಸ್‌ ವೈದ್ಯರು ಹಾಗೂ 2,500 ಅರೆವೈದ್ಯಕೀಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದೇವೆ. ಸಂವಿಧಾನದ 375 (ಜೆ) ನಿಯಮದ ಪ್ರಕಾರ ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಮೀಸಲಾತಿ ನೀಡಬೇಕಾಗಿ ರುವುದರಿಂದ ನೇಮಕಾ ತಿಯಲ್ಲಿ ಸ್ವಲ್ಪ ವಿಳಂಬ ಆಗಿದೆ.

ನಾನು ಏಳು ವರ್ಷಗಳ ಕಾಲ ರಾಜ್ಯದಲ್ಲಿ ಹಣಕಾಸು ಇಲಾಖೆ ನಿರ್ವಹಣೆ ಮಾಡಿದ್ದೇನೆ. ಈಗಲೂ ಆ ಖಾತೆ ನನ್ನ ಬಳಿ ಇದೆ. ಪೊಲೀಸ್‌, ವೈದ್ಯಕೀಯ ಮತ್ತು ಶಿಕ್ಷಣದಂತಹ ಇಲಾಖೆಗಳ ನೇಮಕಾತಿಗೆ ಯಾವತ್ತೂ ನಿರ್ಬಂಧ ಹೇರಲಿಲ್ಲ. ಈಗಲೂ ವೈದ್ಯರ ನೇಮಕಾತಿಗೆ ಹಣಕಾಸು ಇಲಾಖೆಯ ನಿರ್ಬಂಧ ಇಲ್ಲ’ ಎಂದು ಸ್ಪಷ್ಟಪ ಡಿಸಿದರು.

ವೈದ್ಯರ ಬೇಡಿಕೆ ಈಡೇರಿಕೆ ಸಂಬಂಧ ಸ್ವಲ್ಪ ಲಘು ಧಾಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘2014ರ ಅಕ್ಟೋಬರ್‌ 29ರಂದು ನಡೆದ ಸಭೆಯಲ್ಲಿ ಎರಡು ಬೇಡಿಕೆ ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸಲು ನಾವು ಒಪ್ಪಿಗೆ ಸೂಚಿ ಸಿದ್ದೆವು. ಅದಕ್ಕೆ ಬದ್ಧರಾಗಿದ್ದೇವೆ’ ಎಂದರು.

ವೇದಿಕೆಯಲ್ಲಿದ್ದ ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯ ಎಚ್‌. ಎಸ್‌. ರವೀಂದ್ರ, ‘ಇಲ್ಲಿಯೇ ವೇತನ ಹೆಚ್ಚಳ ಘೋಷಿಸಿ ಬಿಡಿ’ ಎಂದು ಮುಖ್ಯ ಮಂತ್ರಿಗೆ ಒತ್ತಾಯಿಸಿದರು. ಅದಕ್ಕೆ, ‘ಇಲ್ಲಿ ಘೋಷಣೆ ಬೇಡ, ನಾನು, ಸಚಿವ ಯು.ಟಿ. ಖಾದರ್‌ ಹಾಗೂ ಅಧಿಕಾರಿ ಗಳು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊ ಳ್ಳುತ್ತೇವೆ. ವೇತನ ಹೆಚ್ಚಳ ಪ್ರಸ್ತಾವ ಜಾರಿಯಲ್ಲಿದೆ. ನೀವು ನಿಶ್ಚಿಂತೆಯಿಂದ ಜನರ ಸೇವೆ ಮಾಡಿ. ವೇತನ ವಿಚಾರ ನಾವು ನೋಡಿ ಕೊಳ್ಳುತ್ತೇವೆ’ ಎಂದು ನಕ್ಕರು.

‘ವೈದ್ಯರು ಯಾವತ್ತೂ ಮುಷ್ಕರ ಮಾಡಬಾರದು. ರೋಗಿಗಳು ಬಂದಾಗ ನಗುಮೊಗದಿಂದ ಸೇವೆ ಮಾಡಿ. ರೋಗಿ ಗಳು ನಿಮ್ಮನ್ನು ನೋಡಿಯೇ ಅರ್ಧ ಗುಣಮುಖರಾಗುತ್ತಾರೆ. ಸಿಡುಬು, ಪೋಲಿಯೊ, ಪ್ಲೇಗ್‌ ಮುಂತಾದ ರೋಗಗಳ ಮೂಲೋತ್ಪಾಟನೆ ಮಾಡು ವಲ್ಲಿ ಮತ್ತು ಆರೋಗ್ಯ ಸೇವೆಯಲ್ಲಿ ರಾಜ್ಯವು ದೇಶದಲ್ಲಿ 5ನೇ ಸ್ಥಾನ ಪಡೆಯಲು ನಿಮ್ಮ ಸೇವೆಯೇ ಕಾರಣ’ ಎಂದು ಸರ್ಕಾರಿ ವೈದ್ಯರ ಸೇವೆ ಶ್ಲಾಘಿ ಸಿದರು.

‘ವೈದ್ಯಕೀಯ ಶಿಕ್ಷಣ ಪಡೆಯು ವವರು ಸರ್ಕಾರಿ ಕಾಲೇಜುಗಳ ಆಯ್ಕೆಗೆ ಪ್ರಯತ್ನಿಸುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಕಲಿಯುವವರಿಗೂ ಸರ್ಕಾರಿ ಸೀಟು ಬೇಕು. ಆದರೆ, ಶಿಕ್ಷಣದ ಬಳಿಕ ಸರ್ಕಾರಿ ಸೇವೆ ಏಕೆ ಬೇಡ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಮ್ಮೇಳನದಲ್ಲಿ ಈ ವಿಚಾರವೂ ಚರ್ಚೆಯಾಗಿ, ಒಂದು ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದು ವಿನಂತಿಸಿದರು. ಆರೋಗ್ಯ ಸಚಿವ ಯು. ಟಿ. ಖಾದರ್‌, ಹಾಸನ ಜಿಲ್ಲಾ   ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ ರಾದ ಎ. ಮಂಜು, ವೈ.ಎನ್‌. ರುದ್ರೇಶ್‌ ಗೌಡ ಇತರರು ಹಾಜರಿದ್ದರು.

‘ಡಿಕೆಶಿ ಮೇಲೆ ಆರೋಪ ಇಲ್ಲ’
ಹಾಸನ:‘ಕಲ್ಲಿದ್ದಲು ಗುತ್ತಿಗೆ ವಿಚಾರದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮೇಲೆ ಯಾವ ಆರೋಪವೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿರುವ ವೈದ್ಯಾಧಿಕಾರಿಗಳ ಸಮ್ಮೇಳನ ಉದ್ಘಾಟಿಸಲು ಶನಿವಾರ ನಗರಕ್ಕೆ ಬಂದ ಅವರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜತೆ ಮಾತನಾಡಿದರು. ‘ಕಲ್ಲಿದ್ದಲು ಖರೀದಿಗೆ ಸಂಬಂಧಿಸಿದಂತೆ ತನಿಖೆಗೆ ಒಂದು ಸಮಿತಿ ರಚನೆಯಾಗಿದ್ದು, ಸಮಿತಿ ವರದಿಯನ್ನೇ ಕೊಟ್ಟಿಲ್ಲ. ವರದಿ ಬಂದ ಮೇಲೆ ಮುಂದಿನ ಯೋಚನೆ ಮಾಡೋಣ’ ಎಂದರು.

‘ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಪಂಜಾಬ್‌ನಲ್ಲಿ ಆಗಿರುವ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಇಲ್ಲಿಗೆ ಅನ್ವಯವಾಗುವುದಿಲ್ಲ. ಸಚಿವರಾಗಿದ್ದವರೂ ರಾಜೀನಾಮೆ ಕೊಟ್ಟು, ಕೆಪಿಎಸ್‌ಸಿ ಅಧ್ಯಕ್ಷರಾಗಿರುವ ಉದಾಹರಣೆ ನಮ್ಮಲ್ಲಿ ಇಲ್ಲವೇ? ರಾಜಕೀಯ ಹುದ್ದೆಗೆ ರಾಜೀನಾಮೆ ಕೊಟ್ಟು ಬೇಕಿದ್ದರೆ ಅಧ್ಯಕ್ಷ ಆಗಬಹುದು. ಕಾನೂನಿನಲ್ಲೇ ಅದಕ್ಕೆ ಅವಕಾಶ ಇದೆ. ನಾವು ಆಯ್ಕೆ ಮಾಡಿರುವ ಸದಸ್ಯರ ಮೇಲೂ ಯಾವುದೇ ಆರೋಪಗಳಿಲ್ಲ. ಆದ್ದರಿಂದ ಇಲ್ಲಿ ನೈತಿಕತೆ ಪ್ರಶ್ನೆ ಬರುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸುಸ್ಥಿತಿಯಲ್ಲಿಯೇ ಇದೆ. ಅಂಥ ಯಾವುದೇ ತೊಂದರೆ ಇಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ರಾಜಕೀಯಪ್ರೇರಿತ ಆರೋಪ ಮಾಡುತ್ತಿದ್ದಾರೆ. ಅಮಿತ್‌ ಷಾ ಭೇಟಿಯಿಂದ ನಾವು ಹೆದರಬೇಕಾದ ಕಾರಣ ಇಲ್ಲ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದು ಅಮಿತ್ ಷಾ ಮಾತ್ರವಲ್ಲ ಹಿಂದೆ ಮೋದಿಯೂ ಹೇಳಿದ್ದರು. ಆದರೆ, ಅದು ಯಾರಿಂದಲೂ ಸಾಧ್ಯವಿಲ್ಲದ ಮಾತು’ ಎಂದು ತಿರುಗೇಟು ನೀಡಿದರು.

Write A Comment