ಕರ್ನಾಟಕ

ಧಾರ್ಮಿಕ ದತ್ತಿ ಕಾಯ್ದೆ ವಿರೋಧಿಸಿ ಸಿಎಂ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಮಠಾಧೀಶರು

Pinterest LinkedIn Tumblr

Siddaramayya-Tention

ಬೆಂಗಳೂರು, ಡಿ.23: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ಧಾರ್ಮಿಕ ದತ್ತಿ ಕಾಯ್ದೆ ವಿರೋಧಿಸಿ ಮಠಾಧೀಶರು ಸಿಎಂ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಸೂದೆ ಜಾರಿಯಾದರೆ ಮಠಗಳ ಮೇಲೆ ಗದಾಪ್ರಹಾರವಾಗುತ್ತದೆ. ಮಠಗಳಿಗೆ ಅಂಕುಶ ಹಾಕಲು ಸರ್ಕಾರ ಹೊರಟಿದೆ. ಈ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಎಲ್ಲಾ ವರ್ಗದ ಮಠಾಧೀಶರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಮಠಾಧೀಶರು ಈ ಕುರಿತು ದೂರು ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಬಗ್ಗೆ ರಾಜ್ಯದಾದ್ಯಂತ ವ್ಯಾಪಕ ಚರ್ಚೆ ನಡೆದಿದೆ.

ಈ ಮಸೂದೆ ಜಾರಿಯಾದರೆ ಮಠಗಳ ಮೇಲೆ ಸರ್ಕಾರವೇ ಹಿಡಿತ ಸಾಧಿಸಲಿದೆ ಎಂಬ ಆತಂಕದಲ್ಲಿ ಇರುವ ಮಠಾಧೀಶರು ಸರ್ಕಾರದ ವಿರುದ್ಧ ದೂರು ನೀಡಲು ಮಠಾಧೀಶರು ದೆಹಲಿಗೆ ತೆರಳಲು ಮುಂದಾಗಿದ್ದು , ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ , ಕಾರ್ಯದರ್ಶಿ ಅಹಮದ್ ಪಾಟೀಲ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಸ್ಪಷ್ಟನೆ:ಈ ಧಾರ್ಮಿಕ ದತ್ತಿ, ಧರ್ಮಾದಾಯ ಮಸೂದೆ ಮಠಗಳ ಸ್ವಾಯತ್ತತೆಗೆ ಧಕ್ಕೆ ತರುವುದಿಲ್ಲ. ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ತಂದಂತಹ ಮಸೂದೆ ನಿವೃತ್ತ ನ್ಯಾಯಮೂರ್ತಿ ಡಿ.ರಾಮಾ ಜೋಯಿಸ್ ಅವರು ನೀಡಿದ ವರದಿ ಅನ್ವಯ ಸುಪ್ರೀಂಕೋರ್ಟ್‌ಗೆ ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ಉತ್ತರ ನೀಡಬೇಕಾಗಿರುವ ಕಾರಣ ಸದನದಲ್ಲಿ ಬಿಲ್ ಮಂಡಿಸಲಾಗಿದೆಯೇ ಹೊರತು ಮಠಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದಲ್ಲ ಎಂದು ಸಿಎಂ ಅವರು ಕಾನೂನು ಸಚಿವ ಟಿ.ಬಿ.ಜಯಚಂದ್ರ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಈ ವಿಷಯ ರಾಜಕೀಯ ಬಣ್ಣ ಪಡೆದುಕೊಂಡಿದ್ದು , ಮಠಾಧೀಶರು ಹೈಕಮಾಂಡ್ ಬಳಿ ತೆರಳಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Write A Comment