ಕರ್ನಾಟಕ

ಮೊಮ್ಮಗಳ ತುಂಟಾಟಕ್ಕೆ ಸಿಟ್ಟಿಗೆದ್ದ ಅಜ್ಜಿ: ಬಾಲಕಿಯನ್ನು ಥಳಿಸಿ ನೇಣು ಬಿಗಿದು ಕೊಲೆ

Pinterest LinkedIn Tumblr

hanging-fan

ದೇವನಹಳ್ಳಿ: ಮೊಮ್ಮಗಳ ತುಂಟಾಟಕ್ಕೆ ಸಿಟ್ಟಿಗೆದ್ದ ಅಜ್ಜಿಯೊಬ್ಬಳು ಏಳು ವರ್ಷದ ಬಾಲಕಿಯನ್ನು ಥಳಿಸಿ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಬೈಚಾಪುರದಲ್ಲಿ ನಡೆದಿದೆ.

ದಿವ್ಯಾ ಮೃತ ಬಾಲಕಿ. ಕುಡಿತದ ಚಟವಿದ್ದ ಆರೋಪಿ ಅಕ್ಕಯ್ಯಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಎದುರು ಆಡುವಾಗ ಮಣ್ಣು ಬಾಯಿಗೆ ಹಾಕಿಕೊಂಡಳು ಎಂಬ ಕಾರಣಕ್ಕೆ ತಮ್ಮ ತಾಯಿ ಬಾಲಕಿಯನ್ನು ಹತ್ಯೆ ಮಾಡಿರುವುದಾಗಿ ಬಾಲಕಿ ಚಿಕ್ಕಪ್ಪ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ: ಭಾನುವಾರ ಸಂಜೆ ಮನೆ ಎದುರು ಆಡುವಾಗ ಸ್ವಲ್ಪ ಮಣ್ಣನ್ನು ದಿವ್ಯಾ ಬಾಯಿಗೆ ಹಾಕಿಕೊಂಡಿದ್ದಾಳೆ. ಇದನ್ನು ಕಂಡು ಸಿಟ್ಟಿಗೆದ್ದ ಅಕ್ಕಯ್ಯಮ್ಮ ಬಾಲಕಿಗೆ ಮನ ಬಂದಂತೆ ಥಳಿಸಿದ್ದಾಳೆ. ನಂತರ ಕೈಗೆ ಸಿಕ್ಕ ಹಗ್ಗದಿಂದ ಬಾಲಕಿಯ ಕುತ್ತಿಗೆ ಬಿಗಿದಿದ್ದಾಳೆ. ಈ ವಿಚಾರ ಗಜೇಂದ್ರ ರಾತ್ರಿ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.

ಬಾಲಕಿ ತಂದೆ ಆದೇಶ್ 3 ವರ್ಷದ ಹಿಂದೆಯೇ ತೀರಿಕೊಂಡಿದ್ದಾನೆ. ತಾಯಿ ಶಶಿಕಲಾ ತಂದೆ ಸಾವಿನ ನಂತರ ಮಗುವನ್ನು ಬಿಟ್ಟು ಊರು ತೊರೆದಿದ್ದಾಳೆ. ಹೀಗಾಗಿ ಗಜೇಂದ್ರನ ಆಶ್ರಯದಲ್ಲಿ ಉಳಿದಿದ್ದ ದಿವ್ಯಾ ಎರಡೂವರೆ ತಿಂಗಳ ಹಿಂದೆಯಷ್ಟೇ ಅಜ್ಜಿಯ ಮನೆಗೆ ವಾಪಸಾಗಿದ್ದಳು. ಪೋಷಕರಿಲ್ಲದ ಮಗುವಿನ ಬಗ್ಗೆ ಅಕ್ಕಯ್ಯಮ್ಮಳಿಗೆ ತಾತ್ಸಾರ ಮನೋಭಾವವಿತ್ತು.

Write A Comment