ರಾಷ್ಟ್ರೀಯ

ಐದು ಹಿಂದೂ ಕುಟುಂಬಗಳು ಸದ್ದಿಲ್ಲದೇ ಕ್ರೈಸ್ತ ಧರ್ಮಕ್ಕೆ

Pinterest LinkedIn Tumblr

converted

ಆಗ್ರಾದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಗಳು ಡಿಸೆಂಬರ್ 25 ರ ಕ್ರಿಸ್ ಮಸ್ ದಿನದಂದು 5000 ಸಾವಿರ ಮಂದಿ ಕ್ರೈಸ್ತರು ಹಾಗೂ ಮುಸ್ಲಿಮರನ್ನು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲು ಭರ್ಜರಿಯಾಗಿ ಅಣಿಯಾಗುತ್ತಿದ್ದರೆ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಐದು ಹಿಂದೂ ಕುಟುಂಬಗಳು ಸದ್ದಿಲ್ಲದೇ ಕ್ರೈಸ್ತ ಧರ್ಮಕ್ಕೆ ಸೇರಿವೆ.

ಪೂರ್ವ ಉತ್ತರ ಪ್ರದೇಶದ ಗಂಗ್ವಾ ಮಾತಿಯಾ ಗ್ರಾಮದ ಈ ಐದು ಕುಟುಂಬಗಳು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿ ಜೀಸಸ್ ಪ್ರಾರ್ಥನೆಯಲ್ಲಿ ತೊಡಗಿದ್ದನ್ನು ಕಂಡ ಗ್ರಾಮದ ಇತರೆ ಮಂದಿ, ಇವರ ಕುಟುಂಬಗಳಿಗೆ ಸಾರ್ವಜನಿಕ ಬಹಿಷ್ಟಾರ ಹಾಕಲು ಮುಂದಾದ ವೇಳೆ ಗ್ರಾಮವನ್ನೇ ತೊರೆದು ಹೋಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು, ಆರು ತಿಂಗಳ ಹಿಂದೆ ಈ ಐದು ಕುಟುಂಬಗಳ ಪೈಕಿ ಒಬ್ಬನಾದ ದಿಲೀಪ್ ಗುಪ್ತಾನ ಮನೆಗೆ ಕ್ರೈಸ್ತ ಪಾದ್ರಿಯೊಬ್ಬರು ಬಂದಿದ್ದರು. ಆದಾದ ಬಳಿಕ ಅಕ್ಕ ಪಕ್ಕದ ವಾಸಿಗಳಾದ ಈ ಐದು ಕುಟುಂಬಗಳ ಒಟ್ಟು 27 ಮಂದಿ ಗ್ರಾಮದ ಯಾವುದೇ ಕಾರ್ಯಕ್ರಮಗಳಿಗೆ ಬರದೇ ಅವರುಗಳೇ ಒಂದು ಗುಂಪಾಗಿದ್ದರು ಎಂದು ತಿಳಿಸಿದ್ದಾರೆ.

ಈಗ ದಿಲೀಪ್ ಗುಪ್ತಾ, ಪ್ರಭು ಪ್ರಜಾಪತಿ, ಕಿಶನ್ ಗುಪ್ತಾ, ಮಾಲ್ತಿ ಗುಪ್ತಾ ಹಾಗೂ ರಾಮವತಿ ಗುಪ್ತಾ ಕುಟುಂಬದ ಒಟ್ಟು 27 ಮಂದಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆಂದು ಹೇಳಲಾಗಿದ್ದು ಈ ಕುರಿತು ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

Write A Comment