ಮನೋರಂಜನೆ

ಬಹು ಕಾಲದ ಬಳಿಕ ಒಟ್ಟಿಗೆ ಸೇರಿದ ಸುದೀಪ್- ದರ್ಶನ್ !

Pinterest LinkedIn Tumblr

kiccha

ಇತ್ತೀಚೆಗಷ್ಟೇ ನಟ ದರ್ಶನ್, ನಾನು ಸುದೀಪ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಅದರಲ್ಲೂ ಮಾಧ್ಯಮಗಳ ಮುಂದೆ ಅಂತೂ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ದರ್ಶನ್ ಕೊಟ್ಟ ಈ ಹೇಳಿಕೆಯಿಂದ ಓಹೋ ದರ್ಶನ್-ಸುದೀಪ್ ನಡುವೆ ಏನೋ ಮಿಸ್ ಅಂಡರ್‌ಸ್ಟಾಂಡಿಗ್ ಆಗಿದೆ ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ಈಗ ಅದೆಲ್ಲ ಕೇವಲ ಮಿತ್ ಎಂಬುದು ಪ್ರೂವ್ ಆಗಿದೆ. ಭಾನುವಾರ ಹೋಟೆಲ್ ಒಂದರಲ್ಲಿ ಸಿಸಿಎಲ್ ಜರ್ಸಿ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇಬ್ಬರೂ ಕುಚುಕು ದೊಸ್ತ್‌ಗಳು, ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡಿದರು.

ನಾವಿಬ್ಬರು ಜತೆಯಲ್ಲಿದ್ದರೂ ಸುದ್ದಿ, ಇಲ್ಲದಿದ್ದರೂ ಸುದ್ದಿ. ಯಾಕೆ ಹೀಗಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇಲ್ಲಿ ಯಾರೂ ಶತ್ರುಗಳಲ್ಲ. ಇಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ನಮ್ಮಿಬ್ಬರ ಸ್ನೇಹಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂಬುದು ಇವರಿಬ್ಬರ ಖಡಕ್ ಮಾತು.

ಇವರಿಬ್ಬರೂ ಎಲ್ಲರಿಗೂ ಅಚ್ಚರಿ ಕೊಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಇಷ್ಟರಲ್ಲಿ ಇಬ್ಬರೂ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.

Write A Comment