ಕರ್ನಾಟಕ

ಜಯಲಲಿತಾಗೆ ಬಿಡುಗಡೆ ಭಾಗ್ಯ: ಶುಭಶುಕ್ರವಾರಕ್ಕೆ ಅಭಿಮಾನಿಗಳಿಗೆ ಶುಭ ಸುದ್ದಿ (updated)

Pinterest LinkedIn Tumblr

 

jayalalithaaaa

ನವದೆಹಲಿ ಅ.೧೭ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ದಿಪಾವಳಿ ಕೊಡುಗೆ ಸಿಕ್ಕಿದೆ. ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರಿದ್ದ ನ್ಯಾಯಪೀಠ ಜಯಲಲಿತಾ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.

ಜಯಲಲಿತಾ ಅವರ ಪರ ಫಾಲಿ ನಾರಿಮನ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ದತ್ತು, ಮದನ್ ಬಿ ಲಾಕೂರ್ ಹಾಗೂ ನ್ಯಾ ಎ.ಕೆ ಶಿಕ್ರಿಹಾದ್ ಅವರಿದ್ದ ನ್ಯಾಯಪೀಠ 21 ದಿನಗಳ ಜೈಲು ವಾಸದ ನಂತರ ಬಿಡುಗಡೆ ಮಾಡಿದೆ. ಬಿಡುಗಡೆಯ ಆದೇಶ ಪ್ರತಿ ಇಂದು ೫ ಗಂಟೆಯೊಳಗೆ ಸಿಕ್ಕಿದಲ್ಲಿ ಜಯಲಲಿತಾಗೆ ಇಂದೇ ಜೈಲು ವಾಸ ಕೊನೆಯಾಗಲಿದೆ. ಇಂದು ೫ ಗಂಟೆಗೆ ಜೈಲು ಅಧೀಕ್ಷಕರ ಕೈಗೆ ಆದೇಶ ಪ್ರತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕ ಹೈಕೋರ್ಟಿಗೆ ಜಯಾ ಪರ ವಕೀಲರು ಮೇಲ್ಮನವಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಡಿಸೆಂಬರ್ 18 ಕಡೆಯ ದಿನಾಂಕವಾಗಿದ್ದು ಅಮ್ದಿನೊಳಗೆ ಎಲ್ಲಾ ದಾಖಲೆ ನೀಡಬೇಕು, ತಪ್ಪಿದಲ್ಲಿ ಶಿಕ್ಷೆ ಖಾಯಂ.

ಡಿ.೧೮ ರ ವರೆಗೂ ಜಯಲಲಿತಾ ಅವರು ಮನೆ ಬಿಟ್ಟು ಹೊರಹೋಗುವ ಹಾಗಿಲ್ಲ, ಸಭೆ ಸಮಾರಂಭದಲಿ ಪಾಲ್ಘೊಳ್ಳುವಂತಿಲ್ಲ ಎನ್ನಲಾಗಿದೆ. ಆದರೆ ಚಿಕಿತ್ಸೆಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ವಿರುದ್ಧ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೊಟಿ ರು ದಂಡ ಆದೇಶ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ ಆದೇಶವನ್ನು ಸುಪ್ರೀಂಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.

ಅಭಿಮಾನಿಗಳು ಖುಷ್:  ‘ಅಮ್ಮಾ’  ಬಿಡುಗಡೆಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರು ಫುಲ್ ಖು್ಷ್ ಆಗಿದ್ದು ಬೆಂಗಳೂರು ಸೇರಿದಂತೆ ವಿವಿದೆಡೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂವಿ, ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಎದುರು ಅಭಿಮಾನಿಗಳ ದಂಡು ನೆರೆದಿದೆ. ಎಲ್ಲರೂ ವಿಜಯೋತ್ಸವದಲ್ಲಿ ಬ್ಯುಸಿಯಾಗಿದ್ದು ಅಮ್ಮಾ ಅವರ ವೀಕ್ಶಣೆಗೆ ಕಾದು ನಿಂತಿದ್ದಾರೆ.

ತಮಿಳುನಾಡು ಸಿಎಂ ಬರ್ತಾರೆ: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ೨೧ ದಿನದ ಜೈಲುವಾಸ ಅನುಭವಿಸಿ ಬಿಡುಗಡೆ ಹೊಂದುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಂತ್ರಿ ಪನ್ನಿರ್ ಸೆಲ್ವಂ ಅವರು ಬೆಂಗಳೂರಿಗೆ ಇಂದು ಆಗಮಿಸಲಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಹಲವು  ಸಚಿವರು ಬರಲಿದ್ದಾರೆ.

ಫುಲ್ ಸೆಕ್ಯೂರಿಟಿ: ಬೆಂಗಳೂರಿನ ಪರಪ್ಪನ ಅಗ್ರಹಾರದ ಸುತ್ತಮುತ್ತಲೂ ೧೪೪ ಸೆಕ್ಷನ್ ಜಾರಿಮಾಡಿದ್ದು ವಿವಿಧ ಉನ್ನತ ಪೊಲೀಸ್ ಅಧಿಕಾರಿಗಳು  ಸೇರಿದಂತೆ ೨೦೦೦ ಕ್ಕೂ ಅಧಿಕ ಪೊಲಿಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.

 

Write A Comment