ಕರಾವಳಿ

ವಿಶ್ವ ತುಳುವರೆ ಪರ್ಬದಲ್ಲಿ ತುಳು ನಾಟಕ ಪರ್ಬ

Pinterest LinkedIn Tumblr

ಮಂಗಳೂರು,ಅ.17: ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಡಿಸೆಂಬರ್12 ರಿಂದ 14 ರ ವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್‌ನ ಆವರಣದಲ್ಲಿ ನಡೆಯುವ ವಿಶ್ವ ತುಳುವರೆ ಪರ್ಬದ ಪೂರ್ವಭಾವಿ ಕಾರ್ಯಕ್ರಮದಂಗವಾಗಿ ಡಿಸೆಂಬರ್ 5 ರಿಂದ 11 ರವರೆಗೆ ಏಳು ದಿನಗಳ ನಾಟಕೋತ್ಸವ ಕಾರ್ಯಕ್ರಮವು ಜರಗಲಿದೆ.

ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್‌ನ ಆವರಣದಲ್ಲಿ ಪ್ರತಿದಿನ ಸಂಜೆ ಆರು ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ನಾಟಕದ ಕಾಲಾವಧಿ ಎರಡೂವರೆ ಗಂಟೆ. ನಾಟಕೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ತಂಡಗಳು ದಿನಾಂಕ 30-10-2014 ರ ಒಳಗೆ ನಾಟಕೋತ್ಸವ ಸಮಿತಿಯ ಸಂಚಾಲಕ ವಿ.ಜಿ.ಪಾಲ್ ಅವರನ್ನು 9448858174 ಸಂಪರ್ಕಿಸಬಹುದಾಗಿದೆ.

ತುಳು ಸಂಸ್ಕೃತಿಯನ್ನು ಬಿಂಬಿಸುವ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ, ಜಾನಪದ ನಾಟಕಗಳಿಗೆ ಆದ್ಯತೆ ನೀಡಲಾಗಿದೆ. ನಾಟಕೋತ್ಸವದಲ್ಲಿ ಪಾಲ್ಗೊಳ್ಳುವವರು ಸಂಪರ್ಕಿಸಬೇಕಾದ ವಿಳಾಸ: ಸಂಚಾಲಕರು, ತುಳು ನಾಟಕ ಪರ್ಬ, `ವಿಶ್ವ ತುಳುವರೆ ಪರ್ಬ 2014′ ಮಂಗಳೂರು ತಾಲೂಕು ಮಹಿಳಾ ಒಕ್ಕೂಟ, ಉರ್ವ ಪೊಲೀಸ್ ಠಾಣಾ ಹತ್ತಿರ, ಉರ್ವ ಮಂಗಳೂರು-6

ತುಳು ಭಾಷೆ, ಸಂಸ್ಕೃತಿಗೆ ಅಪೂರ್ವ ದೇಣಿಗೆಯನ್ನು ನೀಡಿದ ತುಳು ನಾಟಕದ ಕೊಡುಗೆಯನ್ನು ನೆನಪಿಸುವ ನಿಟ್ಟಿನಲ್ಲಿ ವಿಶ್ವ ತುಳುವರೆ ಪರ್ಬದ ಸಂದರ್ಭದಲ್ಲಿ ತುಳುನಾಡಿನ ಪ್ರಾತಿನಿಧಿಕ ನಾಟಕಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ತುಳುವರೆ ಪರ್ಬದ ಸಮಿತಿಯ ಪ್ರಕಟನೆ ತಿಳಿಸಿದೆ.

Write A Comment