ಕರ್ನಾಟಕ

ಪರಪ್ಪನ ಅಗ್ರಹಾರದಲ್ಲಿ ಅಮ್ಮ; ಮುಂದುವರಿದ ಅಭಿಮಾನಿಗಳ ಪ್ರತಿಭಟನೆ

Pinterest LinkedIn Tumblr

jaya

ಬೆಂಗಳೂರು, ಅ. 2: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಜೈಲು ಸೇರಿ ಇಂದಿಗೆ ಆರು ದಿನ ಕಳೆದಿದ್ದರೂ, ಅವರ ಬಿಡುಗಡೆಗಾಗಿ ಪ್ರತಿಭಟನೆಗೆಳು ನಿಂತಿಲ್ಲ. ಇಂದು ಬೆಳಗ್ಗೆ ತಮಿಳುನಾಡಿನಿಂದ ಬಂದಿದ್ದ ಸುಮಾರು 50ಕ್ಕೂ ಹೆಚ್ಚು ಜನರಿದ್ದ ತಂಡದಲ್ಲಿ ನಾಲ್ಕು ಜನ ತಲೆ ಬೋಳಿಸಿಕೊಂಡು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಬಳಿಕ ಜೈಲ್ ಅಧಿಕಾರಿಗಳ ಮಧ್ಯಪ್ರವೇಶದಿಂದ ಪ್ರತಿಭಟನೆ ಕೈ ಬಿಡಬೇಕಾಯಿತು.

ಆರೋಗ್ಯದಲ್ಲಿ ತೊಂದರೆಯಿಲ್ಲ: ಜೈಲು ಶಿಕ್ಷೆಗೆ ಗುರಿಯಾಗಿರುವ ಜಯಲಲಿತಾರ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೈಲು ಅಧೀಕ್ಷಕ ಜಯಸಿಂಹ ತಿಳಿಸಿದ್ದಾರೆ.

ಜಯಲಲಿತಾರ ಅರೋಗ್ಯದಲ್ಲಿ ಏರುಪೇರಾಗಿದೆ ಎಂಬ ವರದಿಗಳೆಲ್ಲ ಸತ್ಯಕ್ಕೆ ದೂರುವಾಗಿದ್ದು, ಈ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿಕೊಂಡರು.

ಸಾಮಾನ್ಯ ಕೈದಿಯಂತೆ ಪರಿಗಣನೆ: ಜೈಲಿಗೆ ಬರುವ ಎಲ್ಲ ಕೈದಿಗಳಂತೆ ಜಯಲಲಿತಾರನ್ನು ನೋಡುತ್ತಿದ್ದು, ಯಾವುದೇ ರೀತಿಯ ವಿಶೇಷ ಸೌಲಭ್ಯ ಕಲ್ಪಿಸಿಲ್ಲ. ಟಿವಿ ಹಾಗೂ ಎಸಿ(ಹವಾನಿಯಂತ್ರಣ)ಯನ್ನೂ ನೀಡಿಲ್ಲ. ವೈದ್ಯರ ಸಲಹೆಯ ಮೇರೆಗೆ ಮಲಗುವುದಕ್ಕಾಗಿ ಒಂದು ಮಂಚದ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೈದಿಗಳ ಉಡುಪನ್ನು ಮಾತ್ರ ನೀಡಿದೆ, ಸಾಮಾನ್ಯ ಉಡುಪಿನಲ್ಲಿರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಯಸಿಂಹ ತಿಳಿಸಿದರು.

ಯಾರೂ ಭೇಟಿಯೂ ಇಲ್ಲ: ಜಯಲಲಿತಾ ಜೈಲು ಸೇರಿ 6 ದಿನ ಕಳೆದಿದ್ದರೂ, ಇಲ್ಲಿಯವರೆಗೆ ಯಾವುದೇ ಶಾಸಕ, ಸಂಸದ ಅಥವಾ ಗಣ್ಯ ವ್ಯಕ್ತಿಗಳು ಸೇರಿದಂತೆ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಜಯಸಿಂಹ ಸ್ಪಷ್ಟಪಡಿಸಿದರು.

Write A Comment