ಮನೋರಂಜನೆ

ಹಾಕಿಯಲ್ಲಿ ನೀಗಿತು 16 ವರ್ಷಗಳ ಚಿನ್ನದ ಬರ; ಮಹಿಳಾ ರಿಲೇ ತಂಡಕ್ಕೆ ಸ್ವರ್ಣ

Pinterest LinkedIn Tumblr

India-Hockey_1

ಇಂಚೋನ್, ಅ.2: ಹದಿನೇಳನೆ ಏಷ್ಯನ್ ಗೇಮ್ಸ್‌ನ ಹಾಕಿಯ ಫೈನಲ್‌ನಲ್ಲಿ ಇಂದು ಭಾರತದ ಪುರುಷರ ತಂಡ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಬಗ್ಗು ಬಡಿದು, ಹದಿನಾರು ವರ್ಷಗಳ ಚಿನ್ನದ ಬರ ನೀಗಿಸಿಕೊಂಡಿದೆ.

ಭಾರತದ ಹಾಕಿ ತಂಡ ಈ ಯಶಸ್ಸಿನೊಂದಿಗೆ 2016ರ ರಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಫೈನಲ್‌ನಲ್ಲಿ 32 ವರ್ಷಗಳ ಬಳಿಕ ಮತ್ತೊಮ್ಮೆ ಪಾಕ್‌ನ್ನು ಎದುರಿಸಿದ ಭಾರತ ತಂಡ ಹಾಲಿ ಚಾಂಪಿಯನ್ ಪಾಕ್‌ಗೆ 9ನೆ ಬಾರಿ ಚಿನ್ನ ಗೆಲ್ಲಲು ಅವಕಾಶ ನೀಡಲಿಲ್ಲ.

India-vs-Pakistan

India-hockey-fan_7

India-hockey_9

India-Hockey_4

India-Hockey_3

India-Hockey_2

ಹಾಕಿಯಲ್ಲಿ ಚಿನ್ನ ಪಡೆಯುವುದರೊಂದಿಗೆ ಭಾರತದ ಖಾತೆಗೆ ಇಂದು ಅವಳಿ ಚಿನ್ನ ಜಮೆಯಾಗಿತ್ತು. ಮಹಿಳೆಯರ ತಂಡ ರೀಲೆಯಲ್ಲಿ ಚಿನ್ನ ಜಯಿಸಿತ್ತು. ಮಹಿಳೆಯರ 4 ್ಡ400 ಮೀಟರ್ ರೀಲೆಯಲ್ಲಿ ಭಾರತದ ಪ್ರಿಯಾಂಕ ಪವಾರ್, ಟಿಂಟು ಲುಕಾ, ಮನ್‌ದೀಪ್ ಕೌರ್ ಮತ್ತು ಎಂ.ಪೂವಮ್ಮ ತಂಡ 3 ನಿಮಿಷ 28.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು.ಜಪಾನ್ ತಂಡ ಎರಡನೆ ಸ್ಥಾನ ಪಡೆಯಿತು. ಭಾರತದ ಇಂದ್ರಜಿತ್ ಸಿಂಗ್ ಶಾಟ್‌ಪುಟ್‌ನಲ್ಲಿ , ಬಾಕ್ಸಿಂಗ್‌ನಲ್ಲಿ ಸತೀಶ್ ಕುಮಾರ್ ಮತ್ತು ವಿಕಾಸ್ ಕೃಷ್ಣನ್ ಕಂಚು ಪಡೆದರು.

ಏಷ್ಯನ್ ಗೇಮ್ಸ್‌ನ 13ನೆ ದಿನವಾಗಿರುವ ಇಂದು ಭಾರತ ಎರಡು ಚಿನ್ನ, 3 ಕಂಚನ್ನು ಪಡೆದಿದ್ದು, ಪದಕ ಪಟ್ಟಿ ಯಲ್ಲಿ 9ನೆ ಸ್ಥಾನ ತಲುಪಿದೆ.

ಕಬಡ್ಡಿಯಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಫೈನಲ್ ನಡೆಯಲಿದ್ದು ಭಾರತಕ್ಕೆ ಇನ್ನೆರಡು ಚಿನ್ನದ ಪದಕ ದೊರೆಯುವ ಸಾಧ್ಯತೆ ಇದೆ.

Write A Comment