ಕರಾವಳಿ

ಮಕ್ಕಳ ಬಿದ್ದ ಹಾಲು ಹಲ್ಲು ಯಾವ ರೋಗಕ್ಕೆ ಮದ್ದಾಗುತ್ತದೆ..ಗೋತ್ತೇ?

Pinterest LinkedIn Tumblr

ಮುದ್ದು ಮುದ್ದಾದ ಹಾಲು ಹಲ್ಲು ಬೀಳುವುದು ಜೀವನದ ಒಂದು ಪ್ರಕ್ರಿಯೆ. ಆ ಬಿದ್ದ ಹಲ್ಲನ್ನು ತಲೆ ದಿಂಬಿನ ಕೆಳಗೆ ಇಟ್ಟು, ಚೆಂದದ ಹಲ್ಲು ಬರಲೆಂದು ಪ್ರಾರ್ಥಿಸಿದ ಬಾಲ್ಯದ ನೆನಪು ಮಾಸಿಲ್ಲ. ಇಲ್ಲವೇ ಸಗಣಿಯಲ್ಲಿ ಮುದ್ದೆ ಮಾಡಿ ಮಹಡಿ ಮೇಲೆ ಎಸೆದಾಯ್ತು. ಆದರೆ. ನಿಜವಾಗಲೂ ಈ ಹಲ್ಲು ಬಿದ್ದ ನಂತರವೇನು ಮಾಡಬೇಕು?

ಅಳು, ನಗು ಹಾಗೂ ಮಾತು ಎಲ್ಲವೂ ವಿಚಿತ್ರ ರೀತಿಯಲ್ಲಿ ಕೇಳಿ ಬರುವುದು ಹಲ್ಲು ಬಿದ್ದಾಗ. ಅಲ್ಲೀವರೆಗೂ ಮುಖದ ಸೌಂದರ್ಯ ಹೆಚ್ಚಿಸುತ್ತಿದ್ದ ದಾಳಿಂಬೆ ಕಾಳಿನಂಥ ಈ ಹಲ್ಲುಗಳು, ಬಿದ್ದಾಗ ಪೂರ್ತಿ ಸೌಂದರ್ಯವನ್ನೇ ಕಸಿದು ಬಿಡುತ್ತದೆ.

ಹಲ್ಲು ಅಲುಗಾಡಿಸಲು ಆರಂಭಿಸಿದಾಗಿನಿಂದಲೇ ಮಕ್ಕಳು ಆ ಹಲ್ಲಿನೊಂದಿಗೆ ಆಟವಾಡಲು ಆರಂಭಿಸುತ್ತದೆ. ಅಲ್ಲಾಡಿಸಿ, ಅಲ್ಲಾಡಿಸಿ ಇಲ್ಲವೇ ಆ ಹಲ್ಲಿನ ಮೇಲೆ ನಾಲಿಗೆ ಆಡಿಸಿಯೇ ಹಲ್ಲನ್ನು ಬೀಳಿಸಿಕೊಳ್ಳುತ್ತದೆ. ಬಿದ್ದ ಜಾಗದಲ್ಲಿಯೂ ನಾಲಗೆಯನ್ನು ತಾಗಿಸುತ್ತಾ, ಸೊಟ್ಟ್ ಸೊಟ್ಟಾಗಿ ಹಲ್ಲು ಹುಟ್ಟುವಂತೆ ಮಾಡಿಕೊಳ್ಳುತ್ತವೆ.

ಹಾಗಾದರೆ ಬಿದ್ದ ಹಲ್ಲನ್ನು ಏನು ಮಾಡಬೇಕು?

ಭಾರತದಲ್ಲಿ ಕೆಲವರು ಹಲ್ಲು ಬಿದ್ದಾಗ ಬಹಳ ಮುತವರ್ಜಿಯಿಂದ ಅದಕ್ಕೊಂದು ಗತಿ ಕಾಣಿಸುತ್ತಾರೆ. ಹತ್ತಿಯಲ್ಲಿ ಸುತ್ತಿ ಮನೆಯ ಸುತ್ತ-ಮುತ್ತ ಇರುವ ಗಾರ್ಡನ್‌ನಲ್ಲಿ ಹೂತಾಕುತ್ತಾರೆ.

ಆದರೆ, ನಿಮಗೆ ಗೊತ್ತಾ ನಿಮ್ಮ ಹಾಲು ಕ್ಯಾನ್ಸರ್‌ನಂಥ ಮಾರಕ ರೋಗಕ್ಕೂ ಮದ್ದಾಗುತ್ತದೆ? ಹೌದು. ನಂಬ್ಲಿಕ್ಕೆ ತುಸು ಷ್ಟವೆನಿಸಿದರೂ, ಆಧುನಿಕ ತಂತ್ರಜ್ಞಾನದಿಂದ ಇವೆಲ್ಲವೂ ಸಾಧ್ಯ. ವಯೋವೃದ್ಧಾಪ್ಯದಿಂದ ಅಥವಾ ವಂಶ ಪಾರಂಪರ್ಯವಾಗಿ ಕಾಡುವ ಅನೇಕ ರೋಗಗಳಿಗೆ ಈ ಹಲ್ಲನ್ನು ರಕ್ಷಿಸಿಟ್ಟುಕೊಂಡರೆ, ಸ್ಟೆಮ್ ಸೆಲ್ ತಂತ್ರಜ್ಞಾನದ ಮೂಲಕ ಸೂಕ್ತ ಚಿಕಿತ್ಸೆ ನೀಡಿಬಹುದು.

ಹುಟ್ಟಿದ ಮಗುವಿನ ಹೊಕ್ಕಳ ಬಳ್ಳಿ, ಬಿದ್ದ ಹಲ್ಲು ಇವೆಲ್ಲವನ್ನೂ ಸುರಕ್ಷಿತವಾಗಿ ಸಂರಕ್ಷಿಸುವಂಥ ತಂತ್ರಜ್ಞಾನ ಬಂದಿದ್ದು, ವೈಜ್ಞಾನಿಕವಾಗಿ ಈ ಅನಗತ್ಯ ಅಂಗಾಗಂಗಳನ್ನು ರಕ್ಷಿಸಿಡುತ್ತಾರೆ. ಇದರಿಂದ ಅಗತ್ಯ ಬಿದ್ದರೆ ಜೀವಕೋಶಗಳನ್ನು ತೆಗೆದು, ರಕ್ತ ಸಂಬಂಧಿಗಳಿಗೆ ವರ್ಗಾಯಿಸಬಹುದಾಗಿದೆ. ಕ್ಯಾನ್ಸರ್‌ನಂಥ ಮಾರಕರೋಗಗಳಿಗೆ ಈ ಚಿಕಿತ್ಸೆ ಪರಿಣಾಮಕಾರಿಯಾಗಬಲ್ಲದು.

ಈಗೀಗ ಸಿರಿವಂತರಲ್ಲಿ ಈ ಟ್ರೆಂಡ್ ಆರಂಭವಾಗಿದ್ದು, ಮಗುವಿನ ಹೊಕ್ಕಳ ಬಳ್ಳಿ ಹಾಗೂ ಬಿದ್ದ ಹಾಲು ಹಲ್ಲನ್ನು ಸಂರಕ್ಷಿಸುಂಥ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ಕುಟಂಬದಲ್ಲಿ ಯಾರಿಗೇ ಜೀವ ಕೋಶ ಸಂಬಂಧಿ ರೋಗ ಬಂದರೂ ಅಗತ್ಯ ಚಿಕಿತ್ಸೆ ನೀಡಲು ಇದು ಸಹಕಾರಿ. ಇದಕ್ಕಾಗಿಯೇ ಲಕ್ಷಗಟ್ಟಲೆ ಹೂಡಿಕೆ ಮಾಡುತ್ತಾರೆ.

ಬಹುಶಃ ಶ್ರೀಮಂತರನ್ನು ಕಾಡುವ ಕೆಲವು ರೋಗಗಳಿಗೆ ಮಾತ್ರ ಇಂಥ ತಂತ್ರಜ್ಞಾನ ಹೆಲ್ಪ್ ಆಗುತ್ತೆ. ದಿನದ ಊಟಕ್ಕೂ ಪರದಾಡುವ ಬಡವರಿಗೆ ಮಾತ್ರ ಇಂಥ ತಂತ್ರಜ್ಞಾನದ ಮೊರೆ ಹೋಗುವುದು ಕಷ್ಟ ಸಾಧ್ಯ.

Comments are closed.