Uncategorized

ತುಂಬಾ ಹೊತ್ತು ಎಸಿಯನ್ನು ಬಳಸುವುದರಿಂದ ಅಗುವ ತೊಂದರೆಗಳು

Pinterest LinkedIn Tumblr

ಹೌದು ಎಸಿಯಲ್ಲಿ ಹೆಚ್ಚು ಸಮಯ ಕೂರುವುದರಿಂದ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಇದರಿಂದ ನಿಮಗೆ ಯಾವ ಯಾವ ರೋಗಗಳು ಬರುತ್ತವೆ ಗೊತ್ತಾ.

ಉಸಿರಾಟದ ತೊಂದರೆ
ಎಸಿಯಲ್ಲಿ ಗಾಳಿಯಿಂದ ಹರಡುವ ಕಾಯಿಲೆಗಳು ಹೆಚ್ಚಾಗುವುದು. ಎಸಿ ಹಾಕಿದ ಕಡೆ ಫ್ರೆಶ್‌ ಗಾಳಿ ಬರುವುದಕ್ಕೆ ಅವಕಾಶವಿರುವುದಿಲ್ಲ, ಕೊಠಡಿಯೊಳಗೆ ಅದೇ ಗಾಳಿ ತಿರುಗಾಡುವುದರಿಂದ ಒಬ್ಬರ ವೈರಲ್‌ ಫೀವರ್ (ಜ್ವರ) ಬೇಗನೆ ಇತರರಿಗೆ ಹರಡುವುದು.

ತಲೆಸುತ್ತು, ತಲೆನೋವು
ಕೆಲವರಿಗೆ ಎಸಿಯಲ್ಲಿ ತುಂಬಾ ಹೊತ್ತು ಕೂತರೆ ತಲೆಸುತ್ತು,ತಲೆನೋವು ಈ ರೀತಿಯ ಸಮಸ್ಯೆ ಕಂಡುಬರುವುದು. ಶುದ್ಧಗಾಳಿಯ ಕೊರತೆಯಿಂದಾಗಿ ಈ ರೀತಿಯ ಸಮಸ್ಯೆ ಕಂಡುಬರುವುದು.

ತ್ವಚೆ ಸಮಸ್ಯೆ
ತುಂಬಾ ಹೊತ್ತು ಎಸಿಯಲ್ಲಿ ಕೂತರೆ ತ್ವಚೆಯ ಹೊಳಪು ಕಡಿಮೆಯಾಗಿ, ಡ್ರೈಯಾಗುವುದು. ಅಲ್ಲದೆ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಕಣ್ಣಿನ ಸಮಸ್ಯೆ
ಕೆಲವರಿಗೆ ಕಣ್ಣು ಉರಿ, ಕಣ್ಣಿನಲ್ಲಿ ನೀರು ಬರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು.

ಸಲಹೆ: ತುಂಬಾ ಹೊತ್ತು ಎಸಿಯಲ್ಲಿ ಕೂರುವುದನ್ನು ಕಡಿಮೆಮಾಡಿ, ನೈಸರ್ಗಿಕ ಗಾಳಿ, ಉಷ್ಣತೆಗೆ ಹೊಂದಿಕೊಳ್ಳುವುದರಿಂದ ಆರೋಗ್ಯವನ್ನು ಜೋಪಾನ ಮಾಡಬಹುದು

 

Comments are closed.