ಕರಾವಳಿ

ಒಂದೇ ಒಂದು ಗ್ರಾಂ ಅರಶಿನ ‘ಶಾರ್ಟ್ ಮೆಮೊರಿ ಲಾಸ್’ ಇರುವವರಿಗೆ ವರದಾನ

Pinterest LinkedIn Tumblr

ಮರೆವು ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿರುವ ಪ್ರಮುಖ ಸಮಸ್ಯೆ. ಧಾವಂತದ ಜೀವನ, ಕೆಲಸದಲ್ಲಿ ಒತ್ತಡ, ಮಾನಸಿಕ ಆಯಾಸದಿಂದಾಗಿ ನಮ್ಮ ಮಿದುಳು ಮೊದಲಿನಷ್ಟು ವೇಗವಾಗಿ ಕೆಲಸಮಾಡುತ್ತಿಲ್ಲ. ಇದರಿಂದಾಗಿ ಪ್ರತಿಯೊಂದು ವಿಷಯವನ್ನೂ ಮರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಸಾಲದೆಂಬಂತೆ ಇತ್ತೀಚೆಗೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆಗಳೂ ಮರೆವನ್ನು ಹೆಚ್ಚಿಸುತ್ತಿವೆ. ಪ್ರಮುಖವಾಗಿ ‘ಶಾರ್ಟ್ ಮೆಮೊರಿ ಲಾಸ್’ ಹೆಚ್ಚಾಗುತ್ತಿದೆ. ಇದೀಗ ಈ ಸಮಸ್ಯೆಗೊಂದು ಪರಿಷ್ಕಾರ ದೊರೆತಿದೆ.

ಕೇವಲ ಒಂದು ಗ್ರಾಂ ಅರಶಿನದಿಂದ ಈ ಸಮಸ್ಯೆಯನ್ನು ಕೊನೆಗಾಣಿಸಬಹುದೆಂದು ವೈದ್ಯರುಗಳು ಹೇಳುತ್ತಾರೆ. ಆಸ್ಟ್ರೇಲಿಯಾದ ಮೆನಸ್ ಯೂನಿವರ್ಸಿಟಿಯಲ್ಲಿ ನಡೆಸಲಾದ ಸಂಶೋಧನೆಯಲ್ಲಿ, ಕೇವಲ ಒಂದು ಗ್ರಾಂ ಅರಶಿನ ‘ಶಾರ್ಟ್ ಮೆಮೊರಿ ಲಾಸ್’ ಇರುವವರಿಗೆ ವರದಾನವಾಗಲಿದೆಯೆಂದು ತಿಳಿದು ಬಂದಿದೆ.

60 ವರ್ಷ ಮೀರಿದ ವೃದ್ಧರ ಮೇಲೆ ಪ್ರಯೋಗ ನಡೆಸಿ, ಎರಡು ಗುಂಪುಗಳನ್ನಾಗಿ ವಿಭಜಿಸಲಾಯಿತು. ಮೊದಲ ಗುಂಪಿಗೆ ಪ್ರತಿದಿನವೂ ಅರಶಿನಯುಕ್ತ ಉಪಹಾರವನ್ನು, ಎರಡನೆಯ ಗುಂಪಿಗೆ ಸಾಮಾನ್ಯ ಆಹಾರವನ್ನು ನೀಡಲಾಯಿತು. ಕೆಲವು ದಿನಗಳ ನಂತರ ಮೊದಲ ಗುಂಪಿನವರ ಮಿದುಳು ಎರಡನೆ ಗುಂಪಿನವರಿಗಿಂತಲೂ ಹೆಚ್ಚು ಚುರುಕಾಗಿ ಕೆಲಸ ಮಾಡಲಾರಂಭಿಸಿತು. ಅಷ್ಟೇ ಅಲ್ಲದೆ, ಮೊದಲ ಗುಂಪಿನವರು ಸಮಸ್ಯೆಗಳನ್ನು ಸುಲಭವಾಗಿ ಪರಿಷ್ಕರಿಸಿದರಂತೆ. ಅರಶಿನದಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ.

ಇದೀಗ ಅರಶಿನದಿಂದ ಮರೆವು ರೋಗಕ್ಕೂ ಪರಿಷ್ಕಾರ ದೊರೆತಿರುವುದು ನಾವೆಲ್ಲರೂ ಸಂತೋಷ ಪಡುವ ವಿಷಯ. ನೀವೂ ಸಹ ನಿಮ್ಮ ಉಪಹಾರಕ್ಕೆ ಪ್ರತಿದಿನವೂ ಒಂದು ಗ್ರಾಂ ಅರಶಿನ ಸೇರಿಸಿ ತಿನ್ನಿ ಹಾಗೂ ಮರೆವು ಸಮಸ್ಯೆಯನ್ನು ದೂರವಿಡಿ.

Comments are closed.