ಕರಾವಳಿ

ಜೀವನದ ಎಲ್ಲಾ ಕಷ್ಟಗಳನ್ನು ನಿರ್ಭಯದಿಂದ ಎದುರಿಸಿದವರಿಗೆ ಕೊನೆಗೆ ಗೆಲುವು ಖಂಡಿತ : ಅನಂತಪ್ರಸಾದ್ ನೈತ್ತಡ್ಕ

Pinterest LinkedIn Tumblr

ಮಂಗಳೂರು : ಮೊದಲು ನಮ್ಮನ್ನು ಹೀಯಾಳಿಸುತ್ತಾರೆ, ನಂತರ ನಮ್ಮ ನಗೆಯಾಡುತ್ತಾರೆ, ಆಮೇಲೆ ಯುದ್ಧಕ್ಕೆ ಬರುತ್ತಾರೆ. ಆವಾಗ ನಾವು ಗೆಲ್ಲುತ್ತೇವೆ. ಎಂದು ಗಾಂಧೀಜಿಯವರು ಹೇಳಿದ್ದರು. ಅದರಂತೆ ಸಮಾಜದಲ್ಲಿ ಹೀಯಾಳಿಸಲ್ಪಟ್ಟು, ನಗೆಪಾಟಲಿಗೊಳಗಾಗಿ, ಜೀವನದ ಎಲ್ಲಾ ಕಷ್ಟಗಳನ್ನು ಎದುರಿಸಿ ಗೆದ್ದವರು ಅನೇಕರು. ಅವರ ಜೀವನಗಾಥೆಗಳನ್ನು ಹಂಚುವ ಮತ್ತು ಅವರ ಬದುಕಿಗೆ ಉತ್ತೇಜನ ನೀಡುವ ವೇದಿಕೆಯನ್ನು ಸೃಷ್ಠಿಸಬೇಕಾಗಿದೆ.

ಈ ಉದ್ದೇಶದಿಂದ ಗಾಂಧಿ ಜಯಂತಿಯಂದು ವಿನ್ನರ್ಸ್ ವೇವ್ ಎಂಬ ಸಂಸ್ಥೆಗೆ ಚಾಲನೆ ನೀಡಿರುವುದು ಸೂಕ್ತವಾಗಿದೆ ಹಾಗೂ ಈ ಸಂಸ್ಥೆಯು ಯಶಸ್ವಿಯಾಗಲಿದೆ ಎಂದು ಅನಂತಪ್ರಸಾದ್ ನೈತ್ತಡ್ಕ ಅವರು ಹೇಳಿದರು. ಅವರು ಮಂಗಳೂರಿನಲ್ಲಿ ನಡೆದ ವಿನ್ನರ್ಸ್ ವೇವ್ ಸಂಸ್ಥೆಯ ಚಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ರಾಜೇಶ್ ಆಳ್ವ ವಿನ್ನರ್ಸ್ ವೇವ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮನದಟ್ಟು ಮಾಡಿದರು. ಹಲವಾರು ಮಂದಿ ತಮ್ಮ ವ್ಯಾಪಾರ, ವಹಿವಾಟು ಮತ್ತು ಯಶಸ್ಸಿನ ಬಗ್ಗೆ ಮಾತನಾಡಿದರು.

ರಿಲಯನ್ಸ್ ಲೈಫ್ ಇನ್ಶೂರೇನ್ಸ್‍ನ ಪ್ರಾಂಚೈಸಿ ಹೋಲ್ಡರ್ ಆಶಾ ಶೆಟ್ಟಿ ಅತ್ತಾವರ, ಗ್ರಾಮೀಣ ನೇಚ್ಚೂರಲ್ಸ್ ಸಂಸ್ಥೆಯ ಪಾಂಡುರಂಗ ಭಟ್ಟ್, ಲೆಟ್ಸ್ ಟ್ರಾವೆಲ್ ಫ್ರೀ ಸಂಸ್ಥೆಯ ಹರೀಶ್ ಶೆಟ್ಟಿ ಪಣಿಯೂರು, ಮಾರ್ಕ್@ ಸಂಸ್ಥೆಯ ಮಹೇಶ್ ಶೆಟ್ಟಿ ಮತ್ತು ಭೂಷಣ್ ಕುಲಾಲ್, ತುಳುವಲ್ಡ್‍ನ ಹರ್ಷ ರೈ ಪುತ್ರಕಳ, ಬಿಲ್ಡಿಂಗ್ ಕಾನ್‍ಟ್ರಕ್ಟರ್ ಯಾದವ್ ಕೋಟ್ಯಾನ್, ಪ್ರೇಮ್‍ನಾಥ್ ಪೊಳಲಿ, ಡಿಎಕ್ಸ್‍ಎನ್ ಸಂಸ್ಥೆಯ ವೇಣುಗೋಪಾಲ್ ಬೆಂಗಳೂರು ಮೊದಲಾದವರು ಪಾಲ್ಗೊಂಡರು. ನ್ಯಾಯವಾದಿ ಶೃತಿಹರ್ಷ ಕಾರ್ಯಕ್ರಮ ನಿರೂಪಿಸಿದರು.

Comments are closed.