ಕರಾವಳಿ

ನಮ್ಮ ನಗರ ಸ್ಚಚ್ಛವಾಗಿ, ಸುಂದರವಾಗಿ ಇಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಕೂಡ ಬಹುಮುಖ್ಯ : ಉಪಮೇಯರ್ ಕೆ.ಮಹಮದ್

Pinterest LinkedIn Tumblr

ಮಂಗಳೂರು ಅಕ್ಟೋಬರ್ 04 : 2014ರಲ್ಲಿ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನ ಇಂದು ದೇಶದ್ಯಾಂತ ಗುರುತಿಸಲ್ಪಟ್ಟಿದ್ದು , ದೇಶದ ಪ್ರತಿಯೊಂದು ವಾರ್ಡ್, ಗ್ರಾಮ, ನಗರ. ಸ್ವಚ್ಚವಾದಾಗ ಮಾತ್ರ ಅಭಿಯಾನ ಯಶ್ವಸ್ವಿಯಾಗಲು ಸಾಧ್ಯ ಮತ್ತು 2019ರೊಳಗೆ ಗಾಂಧೀಜಿ ಯವರ ಸುಂದರ ಭಾರತ ನಿರ್ಮಾಣವಾಗಲು ನಮ್ಮೆಲ್ಲರ ಕರ್ತವ್ಯ ಮುಖ್ಯವಾದುದು ಅದರಲ್ಲೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದುದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳೂರು ನಗರದ ಉಪ ಮೇಯರ್ ಕೆ.ಮಹಮದ್ ಕಾರ್ಯಕ್ರಮದಲ್ಲಿ ತಿಳಿಸಿದರು.

ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬ ದ್ಯೇಯ ವಾಕ್ಯದಂತೆ ನಾವೆಲ್ಲರೂ ಸ್ವಚ್ಛತೆಯಲ್ಲಿ ಭಾಗಿಯಾಗೋಣ ಮತ್ತು ಮಂಗಳೂರು ನಗರವನ್ನು ಸ್ವಚ್ಛತೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣವೆಂದು ತಿಳಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು, ಶಿವಮೊಗ್ಗ ಇಲಾಖೆಯು ಡಾ.ಪಿ.ದಯಾನಂದ ಪೈ, ಸದಾನಂದ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇವರ ಸಹಯೋಗದಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ(ನಗರ)ವನ್ನು ಅಕ್ಟೋಬರ್ 4 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯಲ್ಲಿ ಕೆ.ಪಿ.ರಾಜೀವನ್, ಭಾರತೀಯ ವಾರ್ತಾ ಸೇವೆ, ಉಪನಿರ್ದೇಶಕರು ಇವರು ಸ್ವಚ್ಛತೆಯ ಕಾರ್ಯಕ್ರಮ ಮನಗಳಲ್ಲಿ, ಮನೆಗಳಲ್ಲಿ, ಮನೆಗಳಿಂದ ಹೊರಹಾಕುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕಳುಹಿಸಿದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಜಿ. ತುಕರಾಂಗೌಡ, ಕ್ಷೇತ್ರ ಪ್ರಚಾರ ಅಧಿಕಾರಿಗಳು, ಶಿವಮೊಗ್ಗ ಇವರು ಮಂಗಳೂರಿನ ನಗರದ ಕಸದ ವಿಲೇವಾರಿ ಸಮಸ್ಯೆಯ ಬಗ್ಗೆ ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದ ಉದ್ದೇಶ, ಘನ ತ್ಯಾಜ್ಯ ನಿರ್ವಹಣೆ, ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾಯೋಜನಾ ಸಂಯೋಜಕರು, ಸ್ವಚ್ಛ ಭಾರತ್ ಮಿಷನ್, ದಕ್ಷಿಣ ಕನ್ನಡ ಜಿಲ್ಲೆ ಮಂಜುಳಾ, ಇವರು ತಮ್ಮ ಭಾಷಣದಲ್ಲಿ ತಿಳಿಸಿದರು.

ರಾಜಶೇಖರ್ ಹೆಬ್ಬಾರ್, ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಇಂದಿನ ವಿದ್ಯಾರ್ಥಿಗಳು ಸೆಲ್ಫಿಯಲ್ಲಿ ಹೆಚ್ಚಿನ ಸಮಯದಲ್ಲಿ ತೊಡಗಿಕೊಂಡಿದ್ದು ಅದನ್ನು ಬಿಟ್ಟು ಸ್ಛಚ್ಚ ಭಾರತ ಅಭಿಯಾನಕ್ಕೆ ತಮ್ಮ ದಿನದ ಕೆಲವು ಸಮಯವನ್ನಾದರೂ ಮೀಸಲಿಟ್ಟು ಅಭಿಯಾನದ ಉದ್ದೇಶ ಶೀಘ್ರ ಈಡೇರಲು ಸಂಕಲ್ಪ ಮಾಡಬೇಕೆಂದು ತಿಳಿಸಿದರು. ನಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ವಿಂಗಡಣೆ ಮಾಡಿ ಸರಿಯಾದ ರೀತಿಯಲ್ಲಿ ಅವುಗಳನ್ನು ವಿಸರ್ಜಿಸಬೇಕೆಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ಯಶ್ವಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರೆ , ಸನ್ನಿಧಿ ಪ್ರಾರ್ಥಿಸಿದರು. ರೋಹಿತ್.ಜಿ.ಎಸ್. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಇವರು ಸ್ವಾಗತಿಸಿದರು. ಡಾ.ಶೈಲರಾಣಿ. ಬಿ. ಇವರು ಕಾರ್ಯಕ್ರಮದ ವಂಧನಾರ್ಪಣೆ ಮಾಡಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಚಿತ್ರ ಪದರ್ಶನ ಮತ್ತು ಜಾಗೃತಿ ಜಾಥವನ್ನು ನಡೆಸಲಾಯಿತು. ಸುಮಾರು 2,000 ವಿದ್ಯಾರ್ಥಿಗಳನ್ನು ಒಳಗೊಂಡ ಜಾಗೃತಿ ಜಾಥ ವೆಂಕಟರಮಣ ದೇವಸ್ಥಾನದಿಂದ ಪ್ರಾರಂಭವಾಗಿ ಸೆಂಟ್ರಲ್ ಮಾರ್ಕೆಟ್ ಮಾರ್ಗವಾಗಿ ಕಾಲೇಜಿನ ಆವರಣದಲ್ಲಿ ಮುಕ್ತಯವಾಯಿತು ಉತ್ತರ ಬಂದರು ಮಂಗಳೂರು ಇನ್ಸ್‍ಪೆಕ್ಟರ್ ಸುರೇಶ್ ಕುಮಾರ್ ಪಿ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.

ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

Comments are closed.