ಮೀಸೆಯು ಗಂಡಸರಿಗೆ ಇದ್ದರೆ, ಅದನ್ನು ಒಂದು ಲಕ್ಷಣ ಎನ್ನುತ್ತಾರೆ. ಆದರೆ, ಅದೇ ಮೂಗಿನ ಕೆಳಗಿನ ಕೂದಲು ಹೆಂಗಸರಲ್ಲಿ ಕಾಣಿಸಿಕೊಂಡರೆ, ಅದು ಒಂದು ಸಮಸ್ಯೆ ಆಗುತ್ತದೆ. ಗಂಡಸರು ಮತ್ತು ಹೆಂಗಸರು, ಇಬ್ಬರಲ್ಲೂ ಕೂಡ ಬಾಯಿಯ ಸುತ್ತ, ಕೆನ್ನೆ ಮೇಲೆ, ಕೈ ಮತ್ತು ಕಾಲುಗಳ ಮೇಲೆ ಹೆಚ್ಚುವರಿ ಕೂದಲು ಇರುವುದು ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆ. ಇದು ಜೀವಕ್ಕೆ ಕುತ್ತು ತರುವಂತ ಸಮಸ್ಯೆ ಅಲ್ಲದಿದ್ದರೂ, ಇದು ಹೆಂಗಸರ ಆತ್ಮವಿಶ್ವಾಸ ಕುಗ್ಗಿಸುವಂತೆ ಮಾಡಿ, ಅವರಿಗೆ ಹಿನ್ನಡೆ ಉಂಟು ಮಾಡುತ್ತದೆ. ಹೀಗಾಗಿ ನಾವು ಈ ಲೇಖನದಲ್ಲಿ ಹೆಂಗಸರಲ್ಲಿ ಮೂಗಿನ ಕೆಳಗೆ ಕಂಡುಬರುವ ಕೂದಲ ನಿರ್ಮೂಲನೆ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.
೧. ಅರಿಶಿನ ಮತ್ತು ಹಾಲು
ಎರಡು ಚಮಚದಷ್ಟು ಅರಿಶಿನಕ್ಕೆ ಎರಡು ಚಮಚದಷ್ಟು ಹಾಲನ್ನು ಚೆನ್ನಾಗಿ ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಬೆರಳುಗಳ ಸಹಾಯದಿಂದ ನಿಮ್ಮ ಮೇಲ್ತುಟಿಯ ಮೇಲೆ ಹಚ್ಚಿಕೊಳ್ಳಿ. ಅದು ಒಣಗಲು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಕೆಲವು ದಿನಗಳ ಕಾಲ ಪ್ರತಿದಿನ ಇದನ್ನ ಮಾಡಿರಿ.
೨. ಮೊಟ್ಟೆಯ ಬಿಳಿ ಭಾಗ ಮತ್ತು ಅರಿಶಿನ
ಮೊಟ್ಟೆಯ ಬಿಳಿ ಭಾಗಕ್ಕೆ ಒಂದು ಚಮಚ ಅರಿಶಿನ ಬೆರೆಸಿ ಚೆನ್ನಾಗಿ ಕಲಿಸಿಕೊಳ್ಳಿ. ಇದನ್ನು ನಿಮ್ಮ ಮೂಗಿನ ಕೆಳಗೆ ಹಚ್ಚಿಕೊಂಡು ಒಂದು ಗಂಟೆಯ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಫೇಸ್ ಮಾಸ್ಕ್ ರೀತಿ ಮುಖದಿಂದ ಸುಲಿಯಿರಿ. ಆಮೇಲೆ ಬಿಸಿ ನೀರಿನಿಂದ ತ್ವಚೆಯನ್ನು ಸ್ವಚ್ಛವಾಗಿಸಿಕೊಳ್ಳಿ. ನಿಮ್ಮ ಕೂದಲನ್ನು ಸಂಪೂರ್ಣವಾಗಿ ಹೋಗಲಾಡಿಸಲು ವಾರಕ್ಕೆ 4 ಬಾರಿ ಇದನ್ನು ಮಾಡಿ.
೩. ಆಲೂಗಡ್ಡೆ ಮತ್ತು ಕಾಳುಗಳು
ಆಲೂಗಡ್ಡೆಯ ಸಪ್ಪೆಯ ಸುಲಿದು, ಅದನ್ನ ಕುಡಿಯುತ್ತಿರುವ ನೀರಿನಲ್ಲಿ ಕಾಳುಗಳೊಂದಿಗೆ ಹಾಕಿ. ನಂತರ ನೀರು ಆರುವವರೆಗೆ ಅವುಗಳನ್ನ ನೀರಿನಲ್ಲಿ ಹಾಗೆಯೇ ಬಿಡಿ. ನಂತರ ಅವುಗಳನ್ನ ಜೇಜ್ಜಿ, ಚೆನ್ನಾಗಿ ಬೆರೆಸಿ, ದಪ್ಪವಾದ ಪೇಸ್ಟ್ ಅನ್ನು ತಯಾರಿಸಿ ಮೂಗಿನ ಕೆಳಗೆ ಹಚ್ಚಿಕೊಳ್ಳಿ. ನಂತರ ಅದು ಗಾಳಿಗೆ ಒಣಗಲು ಹಾಗೆಯೇ ಬಿಟ್ಟು, ಬಟ್ಟೆಯಿಂದ ಉಜ್ಜಿ ತೊಳೆದುಕೊಳ್ಳಿ.
೪. ಪಪ್ಪಾಯ ಮತ್ತು ಅರಿಶಿನ
ಪಪಾಯ ಹಣ್ಣಿನ ಒಂದು ತುಂಡನ್ನು ಚೆನ್ನಾಗಿ ಜೇಜ್ಜಿಕೊಳ್ಳಿ ಮತ್ತು ಅದಕ್ಕೆ ಅರ್ಧ ಚಮಚ ಅರಿಶಿನವನ್ನು ಬೆರೆಸಿ, ಚೆನ್ನಾಗಿ ಕಲಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮೂಗಿನ ಕೆಳಗೆ ಹಚ್ಚಿಕೊಳ್ಳಿ. ಅದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆಯಿರಿ.
೫. ಸಕ್ಕರೆ ಪಾಕ
ಒಂದು ಪ್ಯಾನ್ ಅಲ್ಲಿ ಸಕ್ಕರೆಯನ್ನು ಒಂದು ನಿಮಿಷದವರೆಗೆ ಬಿಸಿ ಮಾಡಿ. ಕರಗಿದ ಸಕ್ಕರೆ ಮೇಲೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ, ಅದು ಗಟ್ಟಿ ಮಿಶ್ರಣವಾಗುವವರೆಗೆ ಚೆನ್ನಾಗಿ ಉರಿದುಕೊಳ್ಳಿ. ಇದು ತಣ್ಣಗಾದ ಮೇಲೆ, ಮೂಗಿನ ಕೆಳಗೆ ಹಚ್ಚಿಕೊಳ್ಳಿ. ನಂತರ ಇದರ ಮೇಲೆ ಒಂದು ಬಟ್ಟೆಯನ್ನು ಇಟ್ಟುಕೊಳ್ಳಿ ಮತ್ತು ವೃತ್ತಾಕಾರದಲ್ಲಿ ಬೆರಳುಗಳ ಮೂಲಕ ಆ ಭಾಗವನ್ನು ಒತ್ತುತ್ತಿರಿ. ನಂತರ, ಒಂದೇ ಸಮನೆ ಆ ಬಟ್ಟೆಯನ್ನು ಎಳೆದುಬಿಡಿ.

Comments are closed.