ಕರಾವಳಿ

ಮಹಿಳೆಯರಿಗಾಗಿ ಬ್ಯೂಟಿ ಮತ್ತು ಗ್ರೂಮಿಂಗ್ ಟ್ರಿಕ್ಸ್

Pinterest LinkedIn Tumblr

ಪ್ರತಿಯೊಂದು ಹೆಣ್ಣಿಗೂ ಗೊತ್ತಿರುತ್ತದೆ ಎಲ್ಲವು ಅಚ್ಚುಕಟ್ಟಾಗಿ ಕಾಣಿಸುವಂತೆ ಮಾಡುವ ಹಿಂದಿರುವ ಶ್ರಮ ಮತ್ತು ಸಮಯ. ಬಟ್ಟೆ ಆಗಲಿ, ಮೇಕ್ಅಪ್ ಆಗಲಿ, ಕೂದಲಾಗಲಿ ಅಥವಾ ಇನ್ನ್ಯಾವುದಾದರೂ ಆಗಿರಲಿ, ಒಂದು ಕೆಟ್ಟಿತು ಎಂದರೆ, ಎಲ್ಲವೂ ಕೆಡುತ್ತದೆ. ಆಗ ಎಲ್ಲದರ ಮೇಲಿ ಹಾಕಿದ ಶ್ರಮ ಮತ್ತು ಸಮಯ ಸಂಪೂರ್ಣ ವ್ಯರ್ಥ ಆದಂತೆ ಅನಿಸುತ್ತದೆ. ಆದರೆ, ಹೆಂಗಸರ ಬದುಕು ಸುಗಮವಾಗಿಸಲು ಕೆಲವು ಟ್ರಿಕ್ಸ್ ಇವೆ. ನಾವು ಅಂತಹ ಟ್ರಿಕ್ಸ್ ಅಲ್ಲಿ ಬಹಳ ಉಪಕಾರಿಯಾದ, ಅದ್ಭುತವಾದ ಕೆಲವು ಟ್ರಿಕ್ಸ್ ಅನ್ನು ಇಲ್ಲಿ ತಿಳಿಸಲಿದ್ದೇವೆ. ಓದಿ :

೧. ಬೈತಲೆ ಬೋಳು ಕಾಣುತ್ತಿದ್ದರೆ, ಮಾಸ್ಕ್ಯಾರ ಬಳಸಿ
ಕೂದಲಿಗೆ ಗಾಢ ಬಣ್ಣ ಹಚ್ಚಿರುವವರು ಅಥವಾ ಕಪ್ಪು ಡೈ ಮಾಡಿಕೊಂಡಿರುವ ಹೆಂಗಸರಿಗೆ, ಬೆಳೆಯುತ್ತಿರುವ ಕೂದಲ ಬುಡಗಳು ಎಷ್ಟು ಕೆಟ್ಟದಾಗಿ ಕಾಣುತ್ತಾವೆ ಎಂಬುದು ಗೊತ್ತಿರುತ್ತದೆ. ಆದರೆ ಇದನ್ನು ನೀವು ನಿಮ್ಮ ಮಾಸ್ಕ್ಯಾರ ಬಳಸುವುದರ ಮೂಲಕ ಮುಚ್ಚಿ ಹಾಕಬಹುದು.

೨. ಕರ್ಲ್ ಮಾಡಿಸಲಿಕ್ಕೆ ಈಗ ಹೇರ್ ಡ್ರೈಯರ್ ಸಾಕು
ನಿಮ್ಮ ಕೂದಲಿನ ಕೆಳಭಾಗವನ್ನು ಅಲೆಯಂತೆ ಕಾಣುವಂತೆ ಮಾಡಲು ನಿಮಗೆ ಈಗ ಯಾವುದೇ ವಿಶೇಷ ಚಿಮುಟ (ಟೊಂಗ್ಸ್) ಬೇಡ. ಕೇವಲ ನಿಮ್ಮ ಕೂದಲನ್ನು ತಿರುಗಿಸಿ ಹಿಡಿದು, ಹೇರ್ ಡ್ರೈಯರ್ ಬಳಸಿ ಕೂದಲನ್ನು ಬಿಸಿ ಮಾಡಿ. ನಿಮ್ಮ ಕೂದಲು ದಪ್ಪ ಇದ್ದರೆ, ಒಂದು ಬಾರಿ ಕೂದಲು ತಿರುಗಿಸುವ ಬದಲು, 2-3 ಸುತ್ತು ಕೂದಲನ್ನು ತಿರುಗಿಸಿ ಹಿಡಿಯಿರಿ.

೩. ಬಾಚಣಿಕೆಗೆ ಕೂದಲು ಸಿಲುಕಿಕೊಳ್ಳಬಾರದೇ?
ಮನೆಯಲ್ಲಿನ ಬಾಚಣಿಕೆಗಲ್ಲಿ ನಾವು ಕೂದಲುಗಳು ಸಿಕ್ಕಿ ಹಾಕಿಕೊಳ್ಳುವುದನ್ನು ನೋಡಿರುತ್ತವೆ. ಹಾಗೆ ಕೂದಲು ಸಿಕ್ಕಿ ಹಾಕಿಕೊಂಡ ಬಾಚಣಿಕೆಯನ್ನು ತೊಳೆಯುವುದೇ ಒಂದು ದೊಡ್ಡ ಸಮಸ್ಯೆ. ನಿಮ್ಮ ಬಾಚಣಿಕೆಗೆ ಕೂದಲು ಸಿಕ್ಕಿ ಹಾಕಿಕೊಳ್ಳಬಾರದು ಎಂದರೆ, ಒಂದು ಟಿಶ್ಯೂ ಪೇಪರ್ ಅನ್ನು ಬಾಚಣಿಕೆ ಮೇಲೆ ಮೇಲಿನ ರೀತಿಯಲ್ಲಿ ಅಂಟಿಸಿ.

೪. ಟೂತ್ ಬ್ರಷ್ ನಿಮ್ಮ ಕೂದಲು ದಪ್ಪವಾಗಿ ಕಾಣುವಂತೆ ಮಾಡುತ್ತದೆ
ನೀವು ದುಬಾರಿ ಶಾಂಪೂ ಅಥವಾ ಕಷ್ಟಕರ ಸ್ಟೈಲಿಂಗ್ ಮಾಡದೆ, ನಿಮ್ಮ ಕೂದಲು ದಪ್ಪವಾಗಿ ಕಾಣುವಂತೆ ಮತ್ತು ಬಹಳ ಸಂಖ್ಯೆಯಲ್ಲಿ ಇರುವಂತೆ ಕಾಣಲು ಮಾಡಬಹುದು. ಅದಕ್ಕೆ ನೀವು ಮಾಡಬೇಕಿರುವುದು ಕೇವಲ ನಿಮ್ಮ ಟೂತ್ ಬ್ರಷ್ ಬಳಸಿ, ಕೂದಲ ಬುಡದಿಂದ ಒಂದೊಂದೇ ಪದರದಿಂದ ಪದರ ಬಾಚುತ್ತಾ ಹೋಗುವುದು.

೫. ನಿಮ್ಮ ಮೇಕ್ಅಪ್ ಬ್ರಷ್ ತನ್ನ ಗಾತ್ರ ಬದಲಾಯಿಸಿಕೊಳ್ಳುತ್ತದೆ
ಒಳ್ಳೆ ಗುಣಮಟ್ಟದ ಮೇಕ್ಅಪ್ ಧರಿಸಲು, ನೀವು ಎಲ್ಲಾ ರೀತಿಯ ಬ್ರಷ್ ಗಳನ್ನ ಖರೀದಿ ಮಾಡಬೇಕಿಲ್ಲ. ಪೌಡರ್ ಬ್ರಷಿಗೆ ಹೇರ್ ಪಿನ್ ಹಾಕುವುದರ ಮೂಲಕ ನೀವು ಅದು ಹರಡಿಕೊಳ್ಳುವಂತೆ ಮಾಡಬಹುದು ಮತ್ತು ರಬ್ಬರ್ ಬ್ಯಾಂಡ್ ಹಾಕಿ ಅದು ಚಿಕ್ಕದಾಗುವಂತೆ ಮಾಡಬಹುದು.

೬. ಆಸ್ಪಿರಿನ್ ನಿಮ್ಮ ಕೂದಲನ್ನು ದೃಢವಾಗಿಸುತ್ತದೆ ಮತ್ತು ಕೆಂಪು ಕಲೆಗಳನ್ನ ದೂರಮಾಡುತ್ತದೆ
ಆಸ್ಪಿರಿನ್ ಅನ್ನು ಹಚ್ಚುವುದರ ಮೂಲಕ ನಿಮ್ಮ ಚರ್ಮವು ಮೃದುವಾಗುತ್ತದೆ ಮತ್ತು ಕೆಂಪು ಕಲೆಗಳು ಮಾಯವಾಗುತ್ತವೆ. ಒಂದೆರೆಡು ಆಸ್ಪಿರಿನ್ ಮಾತ್ರೆಗಳನ್ನ ಸ್ವಲ್ಪ ನೀರಿನಲ್ಲಿ ನೆನೆಸಿ, ಅದನ್ನ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 5 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.

ಕೂದಲಿಗೂ ಹಾಗೆ ಮಾಡಿ. ಒಂದೆರೆಡು ಆಸ್ಪಿರಿನ್ ಮಾತ್ರೆಗಳನ್ನ ಪುಡಿ ಮಾಡಿ, ನಿಮ್ಮ ಶಾಂಪೂವಿಗೆ ಮಿಕ್ಸ್ ಮಾಡಿ. ಎಂದಿನಂತೆ ನಿಮ್ಮ ತಲೆಯನ್ನು ತೊಳೆಯಿರಿ.

೭. ಬ್ಯಾಂಡೇಜ್ ಉಪಯೋಗಿಸಿ ನಿಮ್ಮ ಕಿವಿಯೋಲೆಗಳು ಇದ್ದ ಜಾಗದಲ್ಲೇ ಇರುವಂತೆ ಮಾಡಿ
ಹುಕ್ ಮೇಲೆ ನೇತು ಹಾಕಿರುವ ಓಲೆಗಳನ್ನ ಧರಿಸಿದಾಗ ಅವುಗಳು ಆಕಡೆ-ಈಕಡೆ ಹೋಳಾಡುತ್ತಿರುತ್ತವೆ ಮತ್ತು ತಿರುಗುತ್ತಿರುತ್ತವೆ. ಅವುಗಳು ಒಂದೇ ಜಾಗದಲ್ಲಿ ಇರುವಂತೆ ಮಾಡಲು ನಿಮ್ಮ ಓಲೆ ಧರಿಸಿದಾಗ, ನಿಮ್ಮ ಕಿವಿಯ ಹಿಂಭಾಗದಲ್ಲಿರುವ ಹುಕ್ಕಿನ ತುದಿಯನ್ನು, ಒಂದು ಬ್ಯಾಂಡೇಜ್ ತುಂಡಿನ ಮೂಲಕ ನಿಮ್ಮ ಕಿವಿಗೆ ಅಂಟಿಸಿಕೊಳ್ಳಿ.

೮. ಬ್ರಾ ವೈರ್ ಇಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ
ಬ್ರಾ ಅಂಚಿನಲ್ಲಿ ಸ್ವಲ್ಪ ಹರಿದಾಗ ಹೊರಬರುವ ವೈರ್ ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡಬಹುದು ಮತ್ತು ನೋವು ಮಾಡುವಂತಹ ಗಾಯ ಉಂಟುಮಾಡಬಹುದು. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹರಿದ ಜಾಗದಲ್ಲಿ ಬ್ಯಾಂಡೇಜ್ ಅನ್ನು ಅಂಟಿಸಿ.

Comments are closed.