ಕರಾವಳಿ

ಅಪಘಾತದಲ್ಲಿ ಮಹಿಳೆ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಸಜೆ

Pinterest LinkedIn Tumblr

ಉಡುಪಿ: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಿರ್ಲಕ್ಷ್ಯತನ ಹಾಗೂ ಅತೀ ವೇಗದ ಚಾಲನೆ ನಡೆಸಿ ಮಹಿಳೆಯ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಘಟನೆ ಏನು?
ದಿನಾಂಕ 23-02-2015 ರಂದು ಸಂಜೆ 4.15 ಗಂಟೆಗೆ ಲಾರಿ ನಂ:ಕೆ‌ಎ 19/ಬಿ7363 ನಂಬರಿನ ಚಾಲಕನಾದ ಮಾಣಿಕ್ಯ ಎಂಬಾತ ಅತೀವೇಗ ಹಾಗೂ ನಿರ್ಲಕ್ಷತನದಿಂದ ಬ್ರಹ್ಮಾವರ ಕಡೆಯಿಂದ ಸಾಸ್ತಾನ ಕಡೆಗೆ ತನ್ನ ಲಾರಿಯನ್ನು ಚಲಾಯಿಸಿ, ಬ್ರಹ್ಮಾವರದಿಂದ ಸಾಸ್ತಾನ ಕಡೆಗೆ ರಸ್ತೆಯ ಎಡಬದಿಯಲ್ಲಿ ನೀದಾನವಾಗಿ ಹೋಗುತ್ತಿದ್ದ ಉಡುಪಿ ನ್ಯಾಯಾಲಯದ ಗುಮಾಸ್ತ ನಾಗೇಂದ್ರ ಮತ್ತು ಆತನ ಹೆಂಡತಿ ಜ್ಯೋತಿ ಇವರ ಮೋಟರ್ ಸೈಕಲನು ಓವರ ಟೇಕ್ ಮಾಡಿ ಎದುರುಗಡೆಯಿಂದ ಬಂದ ವಾಹನವನ್ನು ನೋಡಿ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಎದುರು ಭಾಗ ಮೋಟರ್ ಸೈಕಲನ ಬಲ ಭಾಗಕ್ಕೆ ಡಿಕ್ಕಿ ಹೋಡೆದ ಪರಿಣಾಮ ಇಬ್ಬರು ರಸ್ತೆಗೆ ಬಿದ್ದಿದ್ದು ಹಿಂಬದಿಸವಾರಾದ ಜ್ಯೋತಿಯವರ ತಲೆಯ ಮೇಲೆ ಲಾರಿ ಚಕ್ರ ಹರಿದು ಹೋಗಿ ಸ್ಥಳದಲ್ಲಿ ಮೃತಪಟ್ಟಿದ್ದರು.

(File Photos/ಸಂಗ್ರಹ ಚಿತ್ರಗಳು)

ಈ ಬಗ್ಗೆ ಬ್ರಹ್ಮಾವರ ಠಾಣೆಯ ಆಗಿನ ವೃತ್ತ ನಿರೀಕ್ಷಕರು ಅರುಣ ಬಿ. ನಾಯ್ಕ ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುಧ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಮಂಜುನಾಥ್ ಎಂ.ಎಸ್ ಅವರು ಆರೋಪಿಗಳಿಗೆ ಭಾ.ದಂ.ಸಂ ಕಲಂ 279, 337, 304(ಎ) ರಡಿ 1 ವರ್ಷ 8 ತಿಂಗಳು ಶಿಕ್ಷೆ ಮತ್ತು ಒಟ್ಟು ರೂ.2500/-ನ್ನು ದಂಡ ವಿಧಿಸಿ ದಿನಾಂಕ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಮ್ತಾಜ್ ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Related News:    ಬ್ರಹ್ಮಾವರ: ಬೈಕ್-ಲಾರಿ ಅಪಘಾತದಲ್ಲಿ ಶಿಕ್ಷಕಿ ದಾರುಣ ಸಾವು   

Comments are closed.