ಅಕ್ಕಿ ಗಂಜಿ ಬೇರೆ… ಬಾರ್ಲಿ ಗಂಜಿಯೇ ಬೇರೆ. ಆದರೆ ಎರಡು ಗಂಜಿಗಳಲ್ಲಿ ಅನೇಕ ಉಪಯೋಗಗಳಿವೆ. ನೀವು ಬಾರ್ಲಿ ಗಂಜಿಯನ್ನ ತಿಂದರೆ ಅನೇಕ ಲಾಭಗಳಿವೆ.
ನೀವು ಬಾರ್ಲಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ನಂತರ ಬಾರ್ಲಿಯನ್ನು ನೀರಿನಲ್ಲಿ ಬೇಯಿಸಬೇಕು. ಆನಂತರ ಸ್ವಲ್ಪ ಹಾಲು, ಕಲ್ಲು ಸಕ್ಕರೆ , ಏಲಕ್ಕಿ ಪುಡಿಯನ್ನು ಸಹ ಮಿಶ್ರಣ ಮಾಡಬಹುದು.
ಏನೇನ್ ಲಾಭ ಇದೆ..?
ದೇಹದಲ್ಲಿನ ಕೊಲೆಸ್ಟ್ರಾಲನ್ನ ಕಡಿಮೆಗೊಳಿಸಬೇಕೆಂದರೆ ಬಾರ್ಲಿ ಗಂಜಿ ತಿನ್ನಬೇಕು. ಬಾರ್ಲಿ ಯಲ್ಲಿ ಇನ್ಸುಲಿನ್ ಉತ್ಪಾದಿಸುವ ಅಂಶಗಳಿವೆ. ಇವು ಶುಗರ್ ಕಾಯಿಲೆಯನ್ನು ನಿಯಂತ್ರಿಸುತ್ತದೆ.
ಹಾಗೆಯೇ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಹಾಗೆಯೇ ನಿಮ್ಮ ಮುಖಕ್ಕೆ ಹೊಸ ಹೊಳಪು ತರುತ್ತದೆ. ಇದರಿಂದ ಉರಿಮೂತ್ರ ಸಮಸ್ಯೆ ನೀಗುತ್ತದೆ. ಇನ್ನು ನಿಮ್ಮ ದೇಹದ ತೂಕ ಇಳಿಸಿಕೊಳ್ಳಬಹುದು. ಎರಡು ದಿನಕ್ಕೆ ಒಮ್ಮೆ ಒಂದು ಲೋಟ ಬಾರ್ಲಿ ಗಂಜಿಯನ್ನು ಕುಡಿದರೆ ದೇಹದ ತೂಕ ತನ್ನಿಂತಾನೇ ಕಡಿಮೆಯಾಗುತ್ತದೆ.
ಇನ್ನು ಬಿಪಿಯಿಂದ ಬಳಲುತ್ತಿರುವವರು ಸಹ ಬಾರ್ಲಿ ಗಂಜಿಗೆ ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು. ಹೀಗೆ ಮಾಡಿದರೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಬಾರ್ಲಿ ಗಂಜಿಯನ್ನು ಕುಡಿದರೆ ದೇಹಕ್ಕೆ ತಂಪು ಸಿಗುತ್ತದೆ. ಆಗ ಹೊಟ್ಟೆ ನೋವು ಸಮಸ್ಯೆ ಹಾಗೂ ಉಷ್ಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ.