ಕರಾವಳಿ

ಕೋಟೇಶ್ವರದಲ್ಲಿ ಖ್ಯಾತ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ

Pinterest LinkedIn Tumblr

ಕುಂದಾಪುರ: ಅದು ಸಂಜೆ ಹೊತ್ತು. ಎಲ್ಲರಲ್ಲಿಯೂ ಯಾರನ್ನೋ ನೋಡುವ ತವಕ. ಕಾಯುವ ಕ್ಷಗಳ ಮಧ್ಯೆಯೇ ಪ್ರೇಕ್ಷಕರ ಮಧ್ಯದಿಂದ ಕೈಬೀಸುತ್ತಾ ಬಂದ ಆ ಸ್ಮಾರ್ಟ್ ವ್ಯಕ್ತಿಯನ್ನ ನೋಡಿ ಅಭಿಮಾನಿಗಳು ಹರ್ಷೋದ್ಘಾರ ಮಾಡಿದ್ರು. ಆ ವ್ಯಕ್ತಿಯೇ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ. ಎಸ್. ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಕೋಟೇಶ್ವರದ ಕೊಡಿ ಹಬ್ಬದ ಸಾಂಸ್ಕ್ರತಿಕ ಕಾರ್ಯಕ್ರಮದ ಪ್ರಯುಕ್ತ ನಿರ್ಮಿಸಲಾದ ಆ ಸುಂದರ ವೇದಿಕೆ. ಈ ಬಗೆಗಿನ ಒಂದು ಝಲಕ್ ಇಲ್ಲಿದೆ.

kundapura_bollywood-actor_sunil-shetty-1 kundapura_bollywood-actor_sunil-shetty-2 kundapura_bollywood-actor_sunil-shetty-3 kundapura_bollywood-actor_sunil-shetty-4 kundapura_bollywood-actor_sunil-shetty-5 kundapura_bollywood-actor_sunil-shetty-6 kundapura_bollywood-actor_sunil-shetty-7 kundapura_bollywood-actor_sunil-shetty-8 kundapura_bollywood-actor_sunil-shetty-9 kundapura_bollywood-actor_sunil-shetty-10 kundapura_bollywood-actor_sunil-shetty-11 kundapura_bollywood-actor_sunil-shetty-12 kundapura_bollywood-actor_sunil-shetty-13 kundapura_bollywood-actor_sunil-shetty-14 kundapura_bollywood-actor_sunil-shetty-15 kundapura_bollywood-actor_sunil-shetty-16 kundapura_bollywood-actor_sunil-shetty-17 kundapura_bollywood-actor_sunil-shetty-18 kundapura_bollywood-actor_sunil-shetty-19 kundapura_bollywood-actor_sunil-shetty-20 kundapura_bollywood-actor_sunil-shetty-21 kundapura_bollywood-actor_sunil-shetty-22 kundapura_bollywood-actor_sunil-shetty-23 kundapura_bollywood-actor_sunil-shetty-24 kundapura_bollywood-actor_sunil-shetty-25 kundapura_bollywood-actor_sunil-shetty-26 kundapura_bollywood-actor_sunil-shetty-27 kundapura_bollywood-actor_sunil-shetty-28 kundapura_bollywood-actor_sunil-shetty-29 kundapura_bollywood-actor_sunil-shetty-30 kundapura_bollywood-actor_sunil-shetty-31 kundapura_bollywood-actor_sunil-shetty-32 kundapura_bollywood-actor_sunil-shetty-33 kundapura_bollywood-actor_sunil-shetty-34 kundapura_bollywood-actor_sunil-shetty-35 kundapura_bollywood-actor_sunil-shetty-36 kundapura_bollywood-actor_sunil-shetty-37

ಕೋಟೇಶ್ವರದಲ್ಲಿ ಇದೀಗ ಕೊಡಿ ಹಬ್ಬದ ಸಂಭ್ರಮ. ಅಲ್ಲಲ್ಲಿ ನಿರ್ಮಿಸಲಾದ ಸುಂದರ ವೇದಿಕೆಗಳಲ್ಲಿ ತರಹೇವಾರಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜನರನ್ನು ಸೆಳೆತಿದೆ. ಅಂತೆಯೇ ಕೋಟೇಶ್ವರ ಶಾಲಾ ಮೈದಾನದಲ್ಲಿ ನಡೆದ ಸುಂದರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತುಂಬಿದ್ದು ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ. ಕುಂದಾಪುರದ ಫ್ರೆಸಿಡೆಂಟ್ ಸಿಕ್ಸರ್ ಎನ್ನುವ ಕ್ರಿಕೇಟ್ ತಂಡದ ಉದ್ಘಾಟನೆಗೆಂದು ದೂರದ ಮುಂಬೈನಿಂದ ನಟ ಕೋಟೇಶ್ವರಕ್ಕೆ ಆಗಮಿಸಿದ್ರು. ನೆಚ್ಚಿನ ನಟ ಆಗಮಿಸುತ್ತಲೇ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವೇದಿಕೆಗೆ ಆಗಮಿಸಿದ ಸುನೀಲ್ ಶೆಟ್ಟಿ ಫ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ ಇದರ ಜೆರ್ಸಿ ಬಿಡುಗಡೆ ಮಾಡಿದ್ದಲ್ಲದೇ ಮಂಗಳೂರಿನ ಪಣಂಬೂರಿನಲಿ ನಡೆಯುವ ಮಂಗಳೂರು ಪ್ರೀಮಿಯರ್ ಲೀಗ್ ನಲ್ಲಿ ಆಡಲಿರುವ ತಂಡದ ಸದಸ್ಯರಿಗೆ ಶುಭಕೋರಿದ್ರು.

ಅಭಿಮಾನಿಗಳನ್ನು ಉದ್ಡೇಶಿಸಿ ಕೊಡಿ ಹಬ್ಬದ ಶುಭಾಶಯ ಎಂದು ಹೇಳಿದಾಗ ಪ್ರೇಕ್ಷಕರ ಚಪ್ಪಾಳೆ ಮುಗಿಲುಮುಟ್ಟಿತ್ತು. ತಮ್ಮೂರಿಗೆ ಬಂದ ಬಾಲಿವುಡ್ ನಟನಿಗೆ ಸಂಘಟಕರು ಹೂಮಾಲೆಯನ್ನು ಹಾಕಿ ಸನ್ಮಾನಿಸಿದ್ರು. ಕ್ರಿಕೇಟ್ ತಂಡದ ಪರವಾಗಿ ನೆನಪಿನ ಕಾಣಿಕೆ ನೀಡಲಾಯ್ತು. ಉದ್ಘಾಟನೆ ಬಳಿಕ ಕೆಳಗಡೆ ಬಂದು ಪ್ರೇಕ್ಷಕರು ಕೂರುವ ಆಸನದಲ್ಲಿ ಕುಳಿತು ಗಂಟೆಗಳ ಕಾಲ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ವೀಕ್ಷಿಸಿದ್ರು. ಅಲ್ಲದೇ ಪ್ರೆಸಿಡೆಂಟ್ ಸಿಕ್ಸರ್ ಇದರ ಪ್ರೋಮೋ ವಿಡಿಯೋ ಕಂಡು ಮೆಚ್ಚುಗು ವ್ಯಕ್ತಪಡಿಸಿದ್ರು. ಇದೇ ಸಂದರ್ಭ ಗಣಪತಿಯ ಹಾಡಿನ ಜೊತೆಗೆ ಯಕ್ಷಗಾನ ಕುಣಿತ ನಡೆಯುತ್ತಿದ್ದಂತೆಯೇ ಕಲಾವಿದರೋರ್ವರು ಕ್ರಿಕೇಟ್ ತಂಡದ ಮಾಲೀಕರಾದ ಅಬ್ದುಲ್ ಸತ್ತಾರ್ ಹಾಗೂ ಇಪ್ತೀಕರ್ ಇಸ್ಮಾಯಿಲ್ ಅವರ ಚಿತ್ರವನ್ನು ಬಿಡಿಸಿ ನೆರೆದ ಎಲ್ಲರ ಗಮನ ಸೆಳೆದರು. ಇನ್ನು ಕ್ರಿಕೇಟ್ ಟೀಂನ ಬ್ರಾಂಡ್ ಅಂಬಾಸಿಡರ್ ಹಾಗೂ ಗಾಯಕಿಯಾಗಿರುವ ಸಂಗೀತಾ ರವೀಂದ್ರನಾಥ್ ಅವರ ಗಾಯನದ ಮೋಡಿ ನೆರೆದವರನ್ನು ಫಿದಾಗೊಳಿಸಿತ್ತು. ಈ ಕಾರ್ಯಕ್ರಮಕ್ಕೆ ಕೋಟೇಶ್ವರ ಕುಂದಾಪುರ ಭಾಗದ ಹತ್ತಾರು ಉದ್ಯಮಿಗಳು ಆಗಮಿಸಿ ಶುಭಕೋರಿದ್ರು, ಸಾವಿರಾರು ಪ್ರೇಕ್ಷಕರು ಸಂಭ್ರಮಕ್ಕೆ ಸಾಕ್ಷಿಯಾದ್ರು.

ಒಟ್ಟಿನಲ್ಲಿ ಟಿವಿ ಪರದೆ ಮೇಲೆ ಹಾಗೂ ಸಿನೆಮಾಗಳಲ್ಲಿ ನೋಡುತ್ತಿದ್ದ ನಟ ಸುನೀಲ್ ಶೆಟ್ಟಿಯವರನ್ನು ಪ್ರತ್ಯಕ್ಷವಾಗಿ ಕಂಡ ಅಭಿಮಾನಿಗಳು ಮಾತ್ರ ಫುಲ್ ಖುಷ್ ಆಗಿದ್ರು.
——————–

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.