ರಾಷ್ಟ್ರೀಯ

ನೋಟ್ ನಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ : ಫೇಸ್​ಬುಕ್ – ವಾಟ್ಸ್ ಅಪ್​ನಲ್ಲಿ ಭಾರೀ ಸಂಚಲನ

Pinterest LinkedIn Tumblr

2000-note

ನವದೆಹಲಿ: ಕಳೆದೊಂದು ತಿಂಗಳಿನಿಂದ ನೋಟ್ ಬ್ಯಾನ್ ವಿಚಾರವಾಗಿ ಅನೇಕ ಉಹಾಪೂಹಗಳು ಹರಿದಾಡುತ್ತಿದ್ದು, ಹೊಸ 500, 2000 ಮೇಲೂ ಪ್ರಭಾವ ಬೀರಿದೆ. ಹೊಸ ನೋಟ್’ನಲ್ಲಿ ಚಿಪ್ ಸೆಟ್ ವದಂತಿ ತಣ್ಣಗಾಗುತ್ತಿದ್ದಂತೆ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಿದ್ರೆ ವೈರಲ್ ಆಗಿರುವ ಸುದ್ದಿಯೇನು? ಇಲ್ಲಿದೆ ನೋಡಿ.

ಫೇಸ್ಬುಕ್ – ವಾಟ್ಸ್ ಅಪ್ನಲ್ಲಿ ಭಾರೀ ಸಂಚಲನ ಹೊಸ ನೋಟು ಬಂದ ಮೊದಲ ದಿನದಿಂದಲೂ ನೋಟ್ ನಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಇದಕ್ಕೆ ಆರ್’ಬಿಐ ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ಮತ್ತೊಂದು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ಹೌದು, ಹೊಸ ನೋಟುಗಳಲ್ಲಿ ರೇಡಿಯೊ ಆಕ್ಟೀವ್ ಶಾಯಿ ಬಳಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹೆಚ್ಚು ನೋಟು ಸಂಗ್ರಹಿಸಿದ್ರೆ ಮಾಹಿತಿ ರವಾನೆಯಾಗುತ್ತೆ. ಈ ಹೊಸ ನೋಟುಗಳಲ್ಲಿ ಪಿ32 ಎಂಬ ರೇಡಿಯೊ ಆಕ್ಟೀವ್ ಐಸೋಟೋಪ್ ಬಳಸಲಾಗಿದ್ದು ಇದರಲ್ಲಿ 15 ಪ್ರೋಟಾನ್ ಹಾಗೂ 17 ನ್ಯೂಟ್ರಾನ್ ಗಳ ಅಂಶವಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಪರಿಣಾಮವಾಗಿ ಇಂತಹ ಅಂಶವಿರುವ ನೋಟುಗಳನ್ನು ಹೆಚ್ಚು ಸಂಗ್ರಹ ಮಾಡಿದ್ರೆ ಸೂಚಕಗಳು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನು ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ದೇಶದಾದ್ಯಂತ ಅಪಾರ ಪ್ರಮಾಣದಲ್ಲಿ ಬಚ್ಚಿಟ್ಟಿದ್ದ 2000 ರೂ ನೋಟುಗಳನ್ನು ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಅಪಾರ ಪ್ರಮಾಣದ ಸಂಪತ್ತನ್ನು ಕಾರು, ಅಂಡರ್ ಗ್ರೌಂಡ್ ಅಲ್ಲದೇ ಬಾತ್ ರೂಂನಂತಹ ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟರೂ ಅಧಿಕಾರಿಗಳು ಕಂಡು ಹಿಡಿದಿದ್ದಾರೆ ಇದನ್ನೆಲ್ಲಾ ಕಂಡರೆ ಐಟಿ ಅಧಿಕಾರಿಗಳಿಗೆ ಹಣವನ್ನು ಬಚ್ಚಿಟ್ಟ ಮಾಹಿತಿ ಹೇಗೆ ಸಿಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಜೊತೆಗೆ ಈ ವದಂತಿ ನಿಜವಾಗಿರಬಹುದು ಎಂಬ ಸಂಶಯವೂ ಹುಟ್ಟಿಕೊಳ್ಳುತ್ತದೆ.

ಒಟ್ಟಾರೆಯಾಗಿ ಈ ಶಾಕಿಂಗ್ ನ್ಯೂಸ್ ಕಾಳಧನಿಕರಿಗೆ ಮತ್ತೆ ತಲೆ ನೋವಾಗಿದೆ. ಒಟ್ಟಿನಲ್ಲಿ ನೋಟ್ ಬ್ಯಾನ್ ಬಳಿಕ ಆರ್ಬಿಐ ಹಾಗೂ ಮೋದಿ ಒಂದಾದ ಮೇಲೊಂದು ಬ್ರೇಕಿಂಗ್ ನ್ಯೂಸ್ ಕೊಡುತ್ತಲೇ ಬಂದಿದ್ದಾರೆ.. ಆದ್ರೇ ಈಗ ಹರಿದಾಡ್ತಿರೋ ಅನುಮಾನಗಳಿಗೆ ಆರ್ ಬಿ ಐ ಏನು ಉತ್ತರಿಸುತ್ತೆ ಅನ್ನೋದು ಸದ್ಯಕ್ಕಿರೋ ಕುತೂಹಲ

Comments are closed.