ರಾಷ್ಟ್ರೀಯ

ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ಇಂದಿನಿಂದ ರಿಯಾಯಿತಿ ನೀಡುವ ನೂತನ ಸೇವೆ ದೇಶಾದ್ಯಂತ ಜಾರಿ

Pinterest LinkedIn Tumblr

petrol

ನವದೆಹಲಿ: ನಗದು ರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈ ಪೈಕಿ ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ರಿಯಾಯಿತಿ ನೀಡುವ ನೂತನ ಸೇವೆಗಳು ಮಂಗಳವಾರದಿಂದಲೇ ಜಾರಿಯಾಗಲಿವೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದಂತೆ ನಗದು ರಹಿತವಾಗಿ ಅಂದರೆ ಕಾರ್ಡ್ ಅಥವಾ ಮೊಬೈಲ್/ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದರೆ 0.75ರಷ್ಟು ರಿಯಾಯಿತಿ ದೊರೆಯಲಿದೆ. ಈ ನೂತನ ಯೋಜನೆಯನ್ನು ಇಂದಿನಿಂದಲೇ ಜಾರಿಗೊಳಿಸಲಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ ಇಂದಿನಿಂದಲೇ ಜಾರಿಗೊಳಿಸುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಐಒಸಿ, “ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡುವ ಗ್ರಾಹಕರ ಖಾತೆಗೆ ನೇರವಾಗಿ ರಿಯಾಯಿತಿ ಹಣವನ್ನು 3 ದಿನಗಳಲ್ಲಿ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದೆ.ಅದರಂತೆ ಪ್ರತೀಲಿಟರ್ ಪೆಟ್ರೋಲ್ ಖರೀದಿ ಮೇಲೆ ಸುಮಾರು 40 ರಿಂದ 45 ಪೈಸೆಯಷ್ಟು ಉಳಿತಾಯವಾಗಲಿದ್ದು, ಈ ಹಣವನ್ನು ಐಒಸಿ ನೇರವಾಗಿ ಗ್ರಾಹಕನ ಬ್ಯಾಂಕ್ ಖಾತೆಗೆ ರವಾನೆ ಮಾಡುತ್ತದೆ. ಪೆಟ್ರೋಲ್ ಮಾತ್ರವಲ್ಲದೇ ಡೀಸೆಲ್ ಖರೀದಿ ಮೇಲಿನಿ ರಿಯಾಯಿತಿ ಹಣವನ್ನು ಕೂಡ ಇದೇ ರೀತಿ ಗ್ರಾಹಕಣ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಕಳೆದ ವಾರವಷ್ಟೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಗದ ರಹಿತ ವಹಿವಾಟು ಉತ್ತೇಜನಕ್ಕೆ 10 ಅಂಶಗಳ ಪ್ರೋತ್ಸಾಹಕ ಯೋಜನೆಗಳನ್ನು ಘೋಷಣೆ ಮಾಡಿದ್ದರು.

Comments are closed.