ಕರ್ನಾಟಕ

ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಐಯೋಡಿನ್ ಅತ್ಯಗತ್ಯ

Pinterest LinkedIn Tumblr

iodine_photo_1

ಮಂಗಳೂರು : ಐಯೋಡಿನ್ ಕೊರತೆ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತವಾಗುವುದು, ಸಂತಾನೋತ್ಪತ್ತಿಯ ತೊಂದರೆ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚುಯಿರುತ್ತದೆ.

ಐಯೋಡಿನ್ ಕೊರತೆಯಿಂದಾಗುವ ದೈಹಿಕ ನ್ಯೂನ್ಯತೆ,ಬುದ್ಧಿ ಮಾಂದ್ಯ ಮಕ್ಕಳ ಜನನ ಕುರಿತು ತಿಳಿಸಿ ಅಯೋಡಿನ್ ಒಂದು ನಿಸರ್ಗದತ್ತವಾಗಿ ದೊರೆಯುವ ಸೂಕ್ಷ್ಮ ಖನಿಜಾಂಶ (ಪೋಷಕಾಂಶ). ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಅಯೋಡಿನ್ ಸಹಜವಾಗಿ ನೀರು ಮತ್ತು ಮಣ್ಣಿನಲ್ಲಿ ದೊರೆಯುತ್ತದೆ. ಅರಣ್ಯ, ಗುಡ್ಡಗಾಡು/ ಇಳಿಜಾರು ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಮಣ್ಣಿನಲ್ಲಿರುವ ಅಯೋಡಿನ್ ಅಂಶವು ಕೊಚ್ಚಿಹೋಗಿ ಅದರಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಅಯೋಡಿನ್ ದೊರೆಯುವುದಿಲ್ಲ ಎಂದರು.

ಅಯೋಡಿನ್ ಕೊರತೆ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಅಂಗಾಂಗಗಳ ಕುಂಠಿತ ಬೆಳವಣಿಗೆ, ಕಿವುಡು ಹಾಗೂ ಮೂಗತನ, ಮೆಳ್ಳೆಗಣ್ಣು, ಕುಬ್ಬತನ, ನಿಂತುಕೊಳ್ಳಲು ಮತ್ತು ನಡೆಯಲು ತೊಂದರೆ ಮುಂತಾದ ತೊಂದರೆಗಳನ್ನು ಕಾಣಬಹುದು.

ಅಯೋಡಿನ್ ಕೊರತೆ ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಪಲ್ಯತೆ ಹಾಗೂ ಗಳಗಂಡ ರೋಗ (ಕತ್ತಿನ ಮುಂಭಾಗಲದಲ್ಲಿ ಥೈರಾಯಿಡ್ ಗ್ರಂಥಿಯ ಊತ)ಗಳನ್ನು ತರಬಹುದು. ಅಯೋಡಿನ್ ಕೊರತೆ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತವಾಗುವುದು, ಸಂತಾನೋತ್ಪತ್ತಿಯ ತೊಂದರೆ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆಯಿರುತ್ತದೆ.

Comments are closed.