ಕರಾವಳಿ

ಮಾಣಿ ಸಮೀಪ ಬಸ್ಸಿಗೆ ಲಾರಿ ಡಿಕ್ಕಿ : ನಾಲರು ಪ್ರಯಣಿಕರಿಗೆ ಗಾಯ

Pinterest LinkedIn Tumblr

accident-logo

ಬಂಟ್ವಾಳ, ಡಿಸೆಂಬರ್.13: ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಖಾಸಗಿ ಬಸ್ಸೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಬಸ್ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾ ಬೆಳಗ್ಗೆ ಸಂಭವಿಸಿದೆ.

ಉಪ್ಪಿನಂಗಡಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಗೆ ಸಿಮೆಂಟ್ ಸಾಗಾಟದ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯ ವೇಳೆ ಗೂಡಂಗಡಿಯೊಂದು ಧ್ವಂಸಗೊಂಡಿದೆ.ಉಪ್ಪಿನಂಗಡಿಯಿಂದ ಬರುತ್ತಿದ್ದ ಸ್ಮಾರ್ಟ್ ಎಂಬ ಖಾಸಗಿ ಬಸ್ ಮಾಣಿ ಬಳಿ ತಲುಪಿದಾಗ ರಸ್ತೆ ಬದಿ ನಿಲ್ಲಿಸಿದ್ದ ಸಿಮೆಂಟ್ ಸಾಗಾಟದ ಲಾರಿಯನ್ನು ಅದರ ಚಾಲಕ ಒಮ್ಮೆಲೆ ಹಿಮ್ಮುಖವಾಗಿ ಹೆದ್ದಾರಿಗೆ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಅಪಘಾತವನ್ನು ತಪ್ಪಿಸುವ ಭರದಲ್ಲಿ ಬಸ್ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯೊಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಅಪಘಾತದ ತೀವ್ರತೆಗೆ ಬಸ್ ಜಖಂಗೊಂಡಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.

Comments are closed.