ರಾಷ್ಟ್ರೀಯ

ಆತನಿಗೆ ಐವರು ಹೆಂಡತಿಯರು, ಇವರ ಬೇಡಿಕೆ ಪೂರೈಸಲು ಏನು ಮಾಡುತ್ತಿದ್ದ ಗೊತ್ತಾ?

Pinterest LinkedIn Tumblr


ಮಧ್ಯ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬನಿಗೆ ಪತ್ನಿ ಸಾಕುವ ಜವಾಬ್ದಾರಿ ಇತ್ತು. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಮಂದಿ ಪತ್ನಿಯರು. ಅವರನ್ನು ನೋಡಿಕೊಳ್ಳಲು ಆತ ತುಳಿದ ದಾರಿ ಮಾತ್ರ ವಿಚಿತ್ರ.

ಐವರನ್ನು ಮದುವೆ ಆಗಿದ್ದ ಭೂಪ ಹೆಸರು ದಿಶದ್​ ಖಾನ್.  ತನ್ನ ಮಡದಿಯರು ಇಡುವ ಬೇಡಿಕೆಗಳನ್ನು ಪೂರೈಸಲು ಸಾಧ್ಯವೇ ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೊದಲನೇ ಹೆಂಡತಿಗೆ ಸೀರೆ ತಂದು ಕೊಟ್ಟರೆ ಎರಡನೇ ಹೆಂಡತಿಗೆ ಬೇಸರವಾಗುತ್ತಿತ್ತು. ಅವಳಿಗೆ ಸೀರೆ ಕೊಡಿಸಿದರೆ ಮೂರನೇ ಹೆಂಡತಿಗೆ. ಹೀಗೆ ನಡೆದೇ ಇತ್ತು. ಹೀಗಾಗಿ, ಆತನಿಗೆ ಹಣ ಹೊಂದಿಸುವುದೇ ಕಷ್ಟವಾಗಿತ್ತು. ಕೊನೆಗೆ ಆತ ಬೇರೆ ದಾರಿ ಕಾಣದೆ ಬೇರೆವಯರಿಂದ ಹಣ ಲಪಟಾಯಿಸುವ ಕಾರ್ಯಕ್ಕೆ ಮುಂದಾಗಿದ್ದ.

ಈತ ಒಂದು ಗ್ಯಾಂಗ್​ ಕಟ್ಟಿಕೊಂಡಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​​ ಕೆಲಸ ಕೊಡಿಸುವ ಭರವಸೆ ನೀಡಿ ಹಣ ಕೀಳುತ್ತಿದ್ದ. ಈವರೆಗೆ ಸುಮಾರು 50 ಜನರಿಗೆ ಈತ ಮೋಸ ಮಾಡಿದ್ದಾನೆ. ಅವರನ್ನು ನಂಬಿಸಿ ಸಾಕಷ್ಟು ಹಣ ಪಡೆದುಕೊಂಡಿದ್ದ. ಈ ಬಗ್ಗೆ ಒಂದೆರಡು ಸಂತ್ರಸ್ತರು ದೂರು ದಾಖಲು ಮಾಡಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರದಲ್ಲಿ ಈ ವಿಚಾರ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಾಲ್ಕೈದು ಜನರನ್ನು ಬಂಧಿಸಲಾಗಿದೆ. ದಿಶದ್​ ಖಾನ್ ಕಿಂಗ್ ಪಿನ್​. ಈತನ ಹೆಂಡತಿಯರ ಪೈಕಿ ಎರಡು ಮೂರು ಜನರು ನರ್ಸ್​ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರಿಗೂ ಪ್ರಕರಣಕ್ಕೂ ಸಂಬಂಧವಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

Comments are closed.