
ಗುರುಗ್ರಾಮ (ಜು.20): ವಿದೇಶಿ ಮಹಿಳೆಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗುರುಗ್ರಾಮ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಂದು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಬಂಧಿತರನ್ನು ಸದ್ದಾಮ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಜು.19ರಂದು ವಿದೇಶಿ ಮಹಿಳೆ ಗುರುಗ್ರಾಮದ ಸಹರಾ ಮಾಲ್ಗೆ ತೆರಳಿದ್ದರು. ಮಧ್ಯರಾತ್ರಿ ವೇಳೆ ಅವರು ದ್ರೋಣಾಚಾರ್ಯ ಮೆಟ್ರೋ ನಿಲ್ದಾಣಕ್ಕೆ ತೆರಳಲು ಆಟೋ ರಿಕ್ಷಾ ಹತ್ತಿದ್ದರು. ಚಾಲಕನ ಹೊರತಾಗಿ ಮತ್ತೋರ್ವ ವ್ಯಕ್ತಿ ಆಟೋದಲ್ಲಿ ಕುಳಿತಿದ್ದ.
ಆಟೋದಲ್ಲಿದ್ದವು ಮಹಿಳೆಯನ್ನು ಮೆಟ್ರೋ ನಿಲ್ದಾಣಕ್ಕೆ ಕೊಂಡೊಯ್ಯುವ ಬದಲು ಶೀತಲ್ ಕಾಲೋನಿಗೆ ಕರೆದೊಯ್ದಿದ್ದರು. ಈ ವೇಳೆ ಮಹಿಳೆ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ಮಹಿಳೆ ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವರನ್ನು ಈಗ ಬಂಧಿಸಲಾಗಿದೆ.
ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಾರೆ. ವಿದೇಶಿ ಮಹಿಳೆಗೆ ನ್ಯಾಯ ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
Comments are closed.