
ಬಳ್ಳಾರಿ: ನಾವು ಜೆಡಿಎಸ್ ಪಕ್ಷಕ್ಕೆ ಸಪೋರ್ಟ್ ಮಾಡಿದ್ದೇವೆ ನಮ್ಮ ಪಕ್ಷದ ಶಾಸಕರನ್ನು ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿ ಕರೆದೊಯ್ದಿದ್ದಾರೆ ಎಂದು ಬಳ್ಳಾರಿಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಅವರು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಅತೃಪ್ತ ಶಾಸಕರಿಗೆ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ನಮ್ಮ ಶಾಸಕರನ್ನು ಮುಂಬೈನಲ್ಲಿ ಇಟ್ಟಿದ್ದಾರೆ. ನಮ್ಮ ನಾಯಕ ಡಿಕೆ ಶಿವಕುಮಾರ್ ಅವರಿಗೂ ಒಳಗೆ ಹೋಗಲು ಬಿಡಲಿಲ್ಲ ಎಂದು ಅವರು ಹೇಳಿದರು.
ಇನ್ನು ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಅಸಯ್ಯ ಆಗುತ್ತದೆ, ತಾಯಿ ಪಕ್ಷದಲ್ಲಿ ಸಿಗುವ ಮರ್ಯಾದೆ ನಿಮಗೆ ಅಲ್ಲಿ ಸಿಗೋಲ್ಲ ಎಂದು ಅನಿಲ್ ಲಾಡ್ ಅವರು ಅತೃಪ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ಆನಂದ್ ಸಿಂಗ್ ಅವರ ರಾಜೀನಾಮೆ ಹಾಗೂ ಗೈರಾಗಿದ್ದಾರೆ ಅವರ ಬಗ್ಗೆ ನಾನು ಮಾತನಾಡೋಲ್ಲ, ಅವರನ್ನು ನಾನು ಸಂಪರ್ಕ ಮಾಡಿಲ್ಲ, ಎಲ್ಲಾ ರಂಗದಲ್ಲಿ ಒಳ್ಳೆಯವರು, ಕೆಟ್ಟವರಿದ್ದಾರೆ. ನಮ್ಮ ಘಟಾನುಘಟಿ ನಾಯಕರು ಇಂದು ಬಿಜೆಪಿಗೆ ಹೋಗಿದ್ದಾರೆ ಎಂದು ಅವರು ತಿಳಿಸಿದರು.
ಸದ್ಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆ ಅಂತ ಆರೋಪ ಇದೆ. ಬಿಜೆಪಿ ಹೋರಾಟ ಒಂದೇ ದಿನ, ರಾಜ್ಯಪಾಲರ ನಡೆ, ಅವರ ಹುದ್ದೆಗೆ ಗೌರವ ತಂದು ಕೊಡಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದ್ದು, ಸುಭದ್ರ ಸರಕಾರ ಕೈ ಶಾಸಕರನ್ನು ಇಟ್ಟುಕೊಂಡು ಹೇಗೆ ನೀಡುತ್ತಾರೆ ಎಂದು ಮಾಜಿ ಶಾಸಕ ಅನಿಲ್ ಲಾಡ್ ಅವರು ಬಳ್ಳಾರಿಯಲ್ಲಿ ಹೇಳಿದರು.
Comments are closed.