ರಾಷ್ಟ್ರೀಯ

ಉನ್ನಾವೋ ರೇಪ್‌: ಬಿಜೆಪಿ ಶಾಸಕ ಸೆಂಗರ್‌ ವೈ ಕೆಟಗರಿ ಭದ್ರತೆ ರದ್ದು

Pinterest LinkedIn Tumblr


ಹೊಸದಿಲ್ಲಿ : ಉನ್ನಾವೋ ಗ್ಯಾಂಗ್‌ ರೇಪ್‌ ಕೇಸ್‌ ಆರೋಪಿ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರಿಗೆ ರಾಜ್ಯ ಸರಕಾರ ಒದಗಿಸಿದ ವೈ ಕೆಟಗರಿ ಭದ್ರತೆಯನ್ನು ಇಂದು ಶುಕ್ರವಾರ ರದ್ದು ಮಾಡಿದೆ.

ಬಿಜೆಪಿ ಶಾಸಕ ಸೆಂಗರ್‌ ಅವರು ಕಳೆದ ಒಂದು ವಾರದಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ತಾನು ಅಮಾಯಕನಾಗಿದ್ದು ತನ್ನನ್ನು ಈ ಕೇಸಿನಲ್ಲಿ ಸಿಕ್ಕಿಸಿ ಹಾಕಲಾಗಿದೆ ಎಂದು ಸೆಂಗರ್‌ ಹೇಳಿಕೊಂಡಿದ್ದಾರೆ.

ಆದರೆ ಸೆಂಗರ್‌ ವಿರುದ್ಧದ ಜನಾಕ್ರೋಶ ತೀವ್ರವಾಗಿರುವುದನ್ನು ಗಮನಿಸಿ ಉತ್ತರ ಪ್ರದೇಶ ಸರಕಾರ ಅವರಿಗೆ ನೀಡಿದ್ದ ವೈ ಕೆಟಗರಿ ಭದ್ರತೆಯನ್ನು ಇಂದ ಶುಕ್ರವಾರ ರದ್ದು ಮಾಡಿತು.

-ಉದಯವಾಣಿ

Comments are closed.