ರಾಷ್ಟ್ರೀಯ

ಕಥುವಾ ರೇಪ್‌ ಕೇಸ್‌: ಪ.ಬಂಗಾಲದ ಚಂಗೇಲ್‌ನಲ್ಲಿ ರೈಲು ತಡೆ

Pinterest LinkedIn Tumblr


ಹೌರಾ : ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದಿದ್ದ ಎಂಟು ವರ್ಷ ಪ್ರಾಯದ ಬಾಲಕಿಯ ಅಪಹರಣ, ಗ್ಯಾಂಗ್‌ ರೇಪ್‌ ಮತ್ತು ಕೊಲೆಯನ್ನು ಖಂಡಿಸಿ ಇಂದು ಇಲ್ಲಿಂದ ಸುಮಾರು 30 ಕಿ.ಇಮà. ದೂರದ ಚಂಗೇಲ್‌ ರೈಲು ನಿಲ್ದಾಣದಲ್ಲಿ ಪ್ರತಿಭಟನೆಕಾರರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ರೈಲ್‌ ರೋಕೋ ನಡೆಸಿದರು.

ಇಂದು ಶುಕ್ರವಾರ ಬೆಳಗ್ಗೆ 7.30ಕ್ಕೆ ಆರಂಭಗೊಂಡಿರುವ ರೈಲ್‌ ರೋಕೋ ಈಗಲೂ ಮುಂದುವರಿದಿದ್ದು ಈ ಮಾರ್ಗದಲ್ಲಿನ ರೈಲು ಸಂಚಾರ ತೀವ್ರವಾಗಿ ಬಾಧಿತವಾಗಿದೆ ಎಂದು ರೈಲ್ವೇ ಮೂಲಗಳು ಹೇಳಿವೆ.

ರೈಲು ತಡೆಯನ್ನು ತೆರವುಗೊಳಿಸುವಂತೆ ಆಗ್ನೇಯ ರೈಲ್ವೇ ಅಧಿಕಾರಿಗಳು ಪ್ರತಿಭಟನಕಾರರ ಮನವೊಲಿಸುತ್ತಿರುವುದಾಗಿ ತಿಳಿದು ಬಂದಿದೆ.

-ಉದಯವಾಣಿ

Comments are closed.