ಬರೇಲಿ: ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಂಡ 52 ವರ್ಷ ಪ್ರಾಯದ ತನ್ನ ಪತಿ ವಸೀಂ ಎಂಬಾತನನ್ನು ಆತನ ಪತ್ನಿ ಬಬ್ಲಿ ಎಂಬಾಕೆ, ಪತಿ ನಿದ್ರಿಸಿಕೊಂಡಿದ್ದ ವೇಳೆ ಆತನ ತಲೆಯ ಮೇಲೆ ರುಬ್ಬುವ ಕಲ್ಲನ್ನು ಎತ್ತಿ ಹಾಕಿ ಸಾಯಿಸಿದ್ದಾಳೆ.
ವಿವಾಹಿತ ವಸೀಂ 27 ವರ್ಷಗಳ ಹಿಂದೆ ಬಬ್ಲಿಯನ್ನು ಮದುವೆಯಾಗಿದ್ದ. ಆತನಿಗೆ ಮೂವರು ಮಕ್ಕಳಿದ್ದಾರೆ. ಹೆಂಡತಿಗೆ ತಿಳಿಸದೇ ಆತ ತಾನು ವಾಸವಾಗಿರುವ ಪ್ರದೇಶದ 35ರ ಹರೆಯದ ಮಹಿಳೆಯೋರ್ವಳನ್ನು ಕೋರ್ಟ್ ಮದುವೆ ಮಾಡಿಕೊಂಡಿದ್ದ.
ಇದರಿಂದ ಕೋಪೋದ್ರಿಕ್ತಳಾಗಿದ್ದ ಬಬ್ಲಿ, ರಾತ್ರಿ ಪತಿ ವಸೀಂ ನಿದ್ರಿಸಿಕೊಂಡಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲನ್ನು ಎತ್ತಿ ಹಾಕಿ ಸಾಯಿಸಿದಳು.
ಪೊಲೀಸರು ಬಬ್ಲಿಯನ್ನು ಬಂಧಿಸಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ವಸೀಂ ನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.
-ಉದಯವಾಣಿ