ಅಂತರಾಷ್ಟ್ರೀಯ

ಮಸ್ಕತ್​ನಲ್ಲಿ ಶಿವ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

Pinterest LinkedIn Tumblr


ಮಸ್ಕತ್​: ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಓಮಾನ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿನ ಪ್ರಸಿದ್ಧ ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮಸ್ಕತ್​ನ ಮತ್ರಾ ಪ್ರದೇಶದಲ್ಲಿ ಈ ದೇವಾಲಯವಿದೆ. 125 ವರ್ಷಗಳ ಹಿಂದೆ ಗುಜರಾತ್​ನ ವ್ಯಾಪಾರಿ ಸಮುದಾಯದವರು ಈ ದೇವಾಲಯವನ್ನು ಕಟ್ಟಿಸಿದ್ದರು. ಆ ನಂತರ 1999ರಲ್ಲಿ ಈ ದೇವಾಲಯದ ನವೀಕರಣ ಕಾರ್ಯ ನಡೆದಿತ್ತು.

ಈ ದೇವಾಲಯದ ಆವರಣದಲ್ಲಿ ಶ್ರೀ ಆದಿ ಮೋತೀಶ್ವರ್​ ಮಹಾದೇವ, ಶ್ರೀ ಮೋತೀಶ್ವರ್​ ಮಹಾದೇವ ಮತ್ತು ಶ್ರೀ ಹನುಮಾನ್​ಜಿ ಗುಡಿಗಳಿವೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ 15 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ನಾಲ್ಕು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ನವದೆಹಲಿಗೆ ವಾಪಸ್​ ಹೊರಟಿದ್ದಾರೆ.

Comments are closed.