ರಾಷ್ಟ್ರೀಯ

ರಾಜ್ಯಸಭೇಲಿ ಗೋ ರಕ್ಷಣೆ ಮಸೂದೆ ಮಂಡಿಸಿದ ಸ್ವಾಮಿ; Billನಲ್ಲಿ ಏನಿದೆ

Pinterest LinkedIn Tumblr


ನವದೆಹಲಿ: ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಗೋ ರಕ್ಷಣಾ ಮಸೂದೆ(2017)ಯನ್ನು (ಇದು ಸದಸ್ಯರ ಖಾಸಗಿ ಮಸೂದೆ) ಮಂಡಿಸಿದ್ದು, ಗೋ ಹಂತಕರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದೂ ಮಸೂದೆಯಲ್ಲಿ ಉಲ್ಲೇಖಿಸಿದ್ದಾರೆ.

ಗೋ ರಕ್ಷಣೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಕೇಂದ್ರ ಸರಕಾರ ಇನ್ನಿತರ ಕಾರ್ಯಗಳಲ್ಲಿ ನಿರತವಾಗಿದೆ. ಗೋ ರಕ್ಷಣೆ ಮಸೂದೆಯನ್ನು ಜಾರಿಗೆ ತರುವುದು ಬಿಜೆಪಿ ಸಂಸದನಾಗಿ ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.

ಮೊಗಲ್ ಸಾಮ್ರಾಜ್ಯದಲ್ಲಿ ಬಹದ್ದೂರ್ ಷಾ ಗೋ ಹತ್ಯೆಯನ್ನು ನಿಷೇಧಿಸಿರುವುದಾಗಿ ಅವರು ರಾಜ್ಯಸಭೆ ಕಲಾಪದಲ್ಲಿ ಉದಾಹರಣೆ ನೀಡಿದರು. ಗೋ ಹತ್ಯೆಯನ್ನು ಭಾರತದಲ್ಲಿ ಒಂದು ಫ್ಯಾಶನ್ ಎಂಬಂತೆ ಮಾಡಿದವರು ಬ್ರಿಟಿಷರು. ಆಧುನಿಕ ವಿಜ್ಞಾನದ ಪ್ರಕಾರ, ಗೋವಿನಿಂದ ಹಲವು ವೈಜ್ಞಾನಿಕ ಉಪಯೋಗಗಳಿವೆ ಎಂಬುದು. ಗೋ ಮೂತ್ರದಿಂದ ಅಲೋಪಥಿ ಮೆಡಿಸಿನ್ಸ್ ತಯಾರಿಸಲಾಗುತ್ತಿದೆ ಎಂದರು.

-ಉದಯವಾಣಿ

Comments are closed.