ಮನೋರಂಜನೆ

ಮೈನವಿರೇಳಿಸುವ ‘ಪ್ರೇಮಬರಹ’ದ ‘ಜೈ ಹನುಮಂತ’ ಹಾಡು

Pinterest LinkedIn Tumblr


ಅರ್ಜುನ್ ಸರ್ಜಾ ಆಕ್ಷನ್ ಕಟ್ ಹೇಳಿರುವ ಪ್ರೇಮಬರಹ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಇದೇ ಚಿತ್ರದ ಜೈ ಹನುಮಂತ ಲಿರಿಕ್ ವೀಡಿಯೋ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದು ಹನುಮಂತನ ಹಾಡು ಮೈನವಿರೇಳಿಸುವಂತಿದೆ.

ಜೈ ಹನುಮಂತ ಹಾಡನ್ನು ವಿಜಯನಾರಸಿಂಹ ಮತ್ತು ಗೋಟೂರಿ ರಚಿಸಿದ್ದು, ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರಕ್ಕಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಟಿಪ್ಪು ಅವರ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.

ಬಿಗ್ ಬಾಸ್ ಸೀಸನ್ 3ರ ರನ್ನರ್ ಅಪ್ ಆಗಿದ್ದ ಚಂದನ್ ಈ ಚಿತ್ರದ ನಾಯಕ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಸ್ಯಾಂಡಲ್‌ವುಡ್‌ಗೆ ಈ ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ ಅವರೇ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ಅಪ್ಪ ಮಗಳ ಕಾಂಬಿನೇಷನ್ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಇದೆ.

ಈ ಹಿಂದೆ ಅರ್ಜುನ್ ಸರ್ಜಾ ಅಭಿನಯದ ‘ಪ್ರತಾಪ್’ ಸಿನಿಮಾದಲ್ಲಿನ ಪ್ರೇಮ ಬರಹ ಕೋಟಿ ತರಹ ಎಂಬ ಹಾಡು ತುಂಬಾ ಜನಪ್ರಿಯವಾಗಿತ್ತು. ಆ ಹಾಡಿನ ಸಾಲನ್ನೇ ಈಗ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ.

Comments are closed.