ರಾಷ್ಟ್ರೀಯ

ಸಾರಾಯಿ ಜಾಲ: ಮಾಹಿತಿ ನೀಡಿದ ಮಹಿಳೆಗೆ ಹಲ್ಲೆ; 6 ಮಹಿಳೆಯರ ಸೆರೆ

Pinterest LinkedIn Tumblr


ಹೊಸದಿಲ್ಲಿ : ದಿಲ್ಲಿ ಹೊರವಲಯದ ನರೇಲಾದಲ್ಲಿ ಕಳ್ಳಭಟ್ಟಿ ಸಾರಾಯಿ ಜಾಲವನ್ನು ಭೇದಿಸುವಲ್ಲಿ ದಿಲ್ಲಿಯ ಮಹಿಳಾ ಆಯೋಗಕ್ಕೆ ಮತ್ತು ಪೊಲೀಸರಿಗೆ ರಹಸ್ಯ ಮಾಹಿತಿ ನೀಡಿ ನೆರವಾದ ಮಹಿಳೆಯೋರ್ವರ ಬಟ್ಟೆ ಹರಿದು ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಮಹಿಳೆಯರನ್ನು ಬಂಧಿಸಿದ್ದಾರೆ.

ಈ ಬಂಧನ ಕುರಿತಾಗಿ ದಿಲ್ಲಿಯ ಲೆ| ಗವರ್ನರ್‌ ಅನಿಲ್‌ ಬೈಜಾಲ್‌ ಅವರು ಟ್ವೀಟ್‌ ಮಾಡಿರುವ ನಡುವೆಯೇ ಆರು ಮಹಿಳೆಯರ ಬಂಧನವನ್ನು ಡೆಪ್ಯುಟಿ ಪೊಲೀಸ್‌ ಕಮಿಷನರ್‌ (ರೋಹಿಣಿ) ರಜನೀಶ್‌ ಗುಪ್ತಾ ಅವರು ಮಾಧ್ಯಮಕ್ಕೆ ದೃಢೀಕರಿಸಿದ್ದಾರೆ.

ದಾಳಿಗಾಗಿ ನರೇಲಾಗೆ ತೆರಳಿ ಅಲ್ಲಿ ತಪಾಸಣೆ ಕೈಗೊಂಡಾಗ ಸುಮಾರು 25 ಮಂದಿಯ ಗುಂಪೊಂದು ತನ್ನ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿತೆಂದು ಡಿಸಿಡಬ್ಲ್ಯು ಸ್ವಾತಿ ಮಲಿವಾಲ್‌ ತಿಳಿಸಿದ್ದಾರೆ.

-ಉದಯವಾಣಿ

Comments are closed.