ರಾಷ್ಟ್ರೀಯ

ಬಿಜೆಪಿ ನಾಯಕ ಮತ್ತು ಆತನ ಡ್ರೈವರ್‌ಗೆ ಗುಂಡೆಸೆದು ಹತ್ಯೆ

Pinterest LinkedIn Tumblr


ಗ್ರೇಟರ್‌ ನೋಯ್ಡಾ : ಸ್ಥಳೀಯ ಬಿಜೆಪಿ ನಾಯಕ ಹಾಗೂ ಆತನ ಡ್ರೈವರ್‌ ನನ್ನು ಅಪರಿಚಿತ ವ್ಯಕ್ತಿಗಳು ಇಲ್ಲಿನ ಬಿಸ್‌ರಾಕ್‌ ಪ್ರದೇಶದಲ್ಲಿ ಗುಂಡಿಟ್ಟು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆ ಘಟನೆ ತಿಗ್ರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಜಿ ಪ್ರಧಾನ ಶಿವ ಕುಮಾರ್‌ ಮತ್ತು ಆತನ ಡ್ರೈವರ್‌ ಹಾಗೂ ಸೆಕ್ಯುರಿಟಿ ಗಾರ್ಡ್‌ನನ್ನು ಗಾಜಿಯಾಬಾದ್‌ ನತ್ತ ಕಾರಿನಲ್ಲಿ ಹೋಗುವಾಗ ಹಂತಕರು ಗುಂಡೆಸೆದು ಕೊಂದಿದ್ದಾರೆ ಎಂದು ಎಸ್‌ಎಚ್‌ಓ ಅಜಯ್‌ ಕುಮಾರ್‌ ತಿಳಿಸಿದ್ದಾರೆ.

ಸ್ಥಳೀಯ ಬಿಜೆಪಿ ನಾಯಕ ಕುಮಾರ್‌ ಮತ್ತು ಆತನ ಡ್ರೈವರ್‌ ಸ್ಥಳದಲ್ಲೇ ಅಸುನೀಗಿದ್ದಾರೆ. ಕುಮಾರ್‌ ಅವರ ನಿಯಂತ್ರಣ ತಪ್ಪಿದ ಕಾರು ಮತ್ತೂಂದು ವಾಹನಕ್ಕೆ ಗುದ್ದಿ ಮಹಿಳೆಯೊಬ್ಬರನ್ನು ಗಾಯಗೊಳಿಸಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಎಸ್‌ಎಚ್‌ಓ ತಿಳಿಸಿದರು.

-ಉದಯವಾಣಿ

Comments are closed.