ಅಂತರಾಷ್ಟ್ರೀಯ

ಕ್ಯಾಲಿಫೋರ್ನಿಯಾದಲ್ಲಿ ದರೋಡೆಕೋರರಿಂದ ಭಾರತೀಯ ವಿದ್ಯಾರ್ಥಿ ಹತ್ಯೆ!

Pinterest LinkedIn Tumblr


ಕ್ಯಾಲಿಫೋರ್ನಿಯಾ: ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಭಾರತ ಮೂಲದ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ದರೋಡೆಕೋರರ ತಂಡ ಗುಂಡಿಟ್ಟು ಹತ್ಯೆಗೈದಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಭಾರತದ ಪಂಜಾಬ್ ಮೂಲದ 21 ವರ್ಷದ ಧರಮ್ ಪ್ರೀತ್ ಸಿಂಗ್ ಜಸ್ಸರ್ ಮೃತ ವಿದ್ಯಾರ್ಥಿಯಾಗಿದ್ದು, ವಾಣಿಜ್ಯ ವ್ಯವಹಾ ಪದವಿ ವಿದ್ಯಾಭ್ಯಾಸಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದನಂತೆ. ಅಂತೆಯೇ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದ ಗ್ಯಾಸ್ ನಿಲ್ದಾಣದ ಬಳಿಯಲ್ಲಿನ ದಿನಸಿ ಮಳಿಗೆಯಲ್ಲಿ ರಾತ್ರಿ ಪಾಳಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದನಂತೆ.

ಧರಮ್ ಪ್ರೀತ್ ಸಿಂಗ್ ಜಸ್ಸರ್ ಕೆಲಸ ಮಾಡುತ್ತಿದ್ದ ಮಳಿಗೆ ನಾಲ್ಕು ಮಂದಿ ದರೋಡೆಕೋರರ ತಂಡ ನುಗ್ಗಿದ್ದು, ಓರ್ವ ಭಾರತೀಯ ಮೂಲದ ವ್ಯಕ್ತಿ ಸೇರಿದಂತೆ ನಾಲ್ಕು ಮಂದಿ ದರೋಡೆಕೋರರ ತಂಡ ಮಳಿಗೆ ಮೇಲೆ ದಾಳಿ ಮಾಡಿದೆ. ಈ ವೇಳೆ ನಗದು ಸೇರಿದಂತೆ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗಿದೆ. ಮಳಿಗೆ ಮೇಲೆ ದರೋಡೆಕೋರರ ತಂಡ ದಾಳಿ ಮಾಡುತ್ತಿದ್ದಂತೆಯೇ ಧರಮ್ ಪ್ರೀತ್ ಸಿಂಗ್ ಜಸ್ಸರ್ ಕ್ಯಾಶ್ ಬಾಕ್ಸ್ ಹಿಂದೆ ಅವಿತಿದ್ದಾರೆ. ದರೋಡೆ ಬಳಿಕ ವಾಪಸ್ ಹೋಗುವಾಗ ದರೋಡೆಕೋರರ ಪೈಕಿ ಓರ್ವ ಪರಾರಿಯಾಗುವ ಭರದಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಗುಂಡು ಧರಮ್ ಪ್ರೀತ್ ಸಿಂಗ್ ಜಸ್ಸರ್ ಗೆ ತಗುಲಿದೆ. ಸ್ಥಳದಲ್ಲೇ ಆತ ಸಾವನ್ನಪ್ಪಿದ್ದು, ಮಾರನೆಯ ದಿನ ಗ್ರಾಹಕನೋರ್ವ ಮಳಿಗೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಫ್ರೆಸ್ನೋ ನಗರದ ಪೊಲೀಸರು ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಭಾರತ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನನ್ನು 22 ವರ್ಷದ ಭಾರತ ಮೂಲದ ವ್ಯಕ್ತಿ ಅಠ್ವಾಳ್ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.