ರಾಷ್ಟ್ರೀಯ

ನೋಟು ನಿಷೇಧದ ಬಳಿಕ ದೇಶದಲ್ಲಿ ಶೇ.80ರಷ್ಟು ಡಿಜಿಟಲ್ ವಹಿವಾಟು

Pinterest LinkedIn Tumblr


ನವದೆಹಲಿ:ದೇಶದಲ್ಲಿ 500, 1000 ರೂ. ಮುಖಬೆಲೆಯ ನೋಟು ಅಮಾನ್ಯೀಕರಣಗೊಂಡ ಬಳಿಕ 2017 18ನೇ ಸಾಲಿನಲ್ಲಿ ಡಿಜಿಟಲ್ ಪಾವತಿ (ವಹಿವಾಟು) ಶೇ.80ರಷ್ಟು ಹೆಚ್ಚಳವಾಗಿರುವುದಾಗಿ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಒಟ್ಟು ವಹಿವಾಟು ಸುಮಾರು 1,800 ಕೋಟಿ ರೂಪಾಯಿಯಷ್ಟು ದಾಟುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.

ಪ್ರಸಕ್ತ ಸಾಲಿನ ಅಕ್ಟೋಬರ್ ವರೆಗೆ 1000 ಕೋಟಿ ರೂಪಾಯಿ ಡಿಜಿಟಲ್ ವಹಿವಾಟು ನಡೆದಿದೆ. ಇದು 2016 17 ಸಾಲಿನ ವಹಿವಾಟಿಗೆ ಸಮನಾಂತರವಾಗಿದೆ. ಈ ಬೆಳವಣಿಗೆ ಜೂನ್, ಜುಲೈ ಹಾಗೂ ಆಗಸ್ಟ್ ನಲ್ಲಿಯೂ ಮುಂದುವರಿದಿದ್ದು ಸುಮಾರು 136ರಿಂದ, 138 ಕೋಟಿ ಸರಾಸರಿ ವಹಿವಾಟು ನಡೆದಿರುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ವಿವರಿಸಿದೆ.

ಕುತೂಹಲಕರ ಬೆಳವಣಿಗೆ ಎಂಬಂತೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಡಿಜಿಟಲ್ ವಹಿವಾಟು ಏರಿಕೆ ಕಂಡಿದ್ದು, ನೋಟು ನಿಷೇಧದಿಂದ ಉಂಟಾದ ನಗದು ಅಭಾವ ತಹಬದಿಗೆ ಬಂದ ನಂತರ ಡಿಜಿಟಲ್ ವಹಿವಾಟಿನ ಪ್ರಮಾಣ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ ಎಂದು ಹೇಳಿದೆ.

ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಈ ವರದಿಯನ್ನು ಹಂಚಿಕೊಂಡಿದ್ದು, ಎಲ್ಲಾ ವಲಯಗಳಲ್ಲಿಯೂ ದಿನದಿಂದ ದಿನಕ್ಕೆ ಆನ್ ಲೈನ್ ವಹಿವಾಟು ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಯುಪಿಐ, ಭೀಮ್, ಐಎಂಪಿಎಸ್, ಎಂ ವಾಲ್ಲೆಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ವಹಿವಾಟು ನಡೆದಿರುವುದಾಗಿ ತಿಳಿಸಿದೆ.

-ಉದಯವಾಣಿ

Comments are closed.